ಭಾನುವಾರ, ಅಕ್ಟೋಬರ್ 20, 2019
28 °C

ಐಐಟಿ ರೂರ್ಕಿ ವಿದ್ಯಾರ್ಥಿಗೆ ರಾಷ್ಟ್ರಪತಿ ಗೌರವ

Published:
Updated:
Prajavani

ರೂರ್ಕಿ: ಸಮೀಪದ ಕಲಿಯಾರ್‌ ಗ್ರಾಮದ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ವಿದ್ಯಾರ್ಥಿ ಅನಂತ್‌ ವಸಿಷ್ಠ (22) ಅವರಿಗೆ ಯುವ ನಾಯಕತ್ವಕ್ಕಾಗಿ ನೀಡುವ ಡಾ.ಜೈ ಕೃಷ್ಣ ಚಿನ್ನದ ಪದಕವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಶುಕ್ರವಾರ ಪ್ರದಾನ ಮಾಡಿದರು.

ಅನಂತ್‌ ಅವರು ಬಿ.ಟೆಕ್‌ (ಪ್ರೊಡಕ್ಷನ್‌ ಆ್ಯಂಡ್‌ ಇಂಡಸ್ಟ್ರಿಯಲ್ ಎಂಜಿನಿಯರಿಂಗ್‌) ಪದವಿ ಪಡೆದಿದ್ದು, ಪ್ರಸ್ತುತ ಗುರುಗ್ರಾಮದ ಖಾಸಗಿ ಕಂಪನಿಯಲ್ಲಿ  ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ವಿದ್ಯಾರ್ಥಿ ಜೀವನದಲ್ಲಿ ಮಾಡಿದ ಸೇವೆಗೆ ಸಂಸ್ಥೆಯ 19ನೇ ಘಟಿಕೋತ್ಸವದಲ್ಲಿ ರಾಷ್ಟ್ರಪತಿ ಅವರು ಪದಕ ನೀಡಿದ್ದಾರೆ. 

ಅನಂತ್, ಬಡ ವಿದ್ಯಾರ್ಥಿಗಳಿಗೆ 2015ರಿಂದ ತರಗತಿಗಳನ್ನು ತೆಗೆದುಕೊಳ್ಳಲು ಆರಂಭಿಸಿದ್ದರು. 2019ರಲ್ಲಿ ತಮ್ಮ ಪದವಿ ಶಿಕ್ಷಣ ಪೂರೈಸುವವರೆಗೂ 8 ಕಿ.ಮೀ ದೂರದ ಗ್ರಾಮಕ್ಕೆ ತೆರಳಿ 15ರಿಂದ 20 ಮಕ್ಕಳಿಗೆ ಗಣಿತ ಬೋಧಿಸುತ್ತಿದ್ದರು. 

Post Comments (+)