ಸೋಮವಾರ, ಏಪ್ರಿಲ್ 6, 2020
19 °C

ಐಎಂಎ ಹಗರಣ: ಬೆಂಗಳೂರಿನ ಹಲವೆಡೆ ಸಿಬಿಐ ಶೋಧ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಐ ಮಾನಿಟರಿ ಅಡ್ವೈಸರಿ (ಐಎಂಎ) ಹಗರಣ ಸಂಬಂಧ ಬೆಂಗಳೂರು ಸೇರಿದಂತೆ ಎಂಟು ಸ್ಥಳಗಳಲ್ಲಿ ಸಿಬಿಐ ಅಧಿಕಾರಿಗಳು ಸೋಮವಾರ ಶೋಧ ಕಾರ್ಯ ನಡೆಸಿದ್ದಾರೆ.

‘ಆಗಿನ ಆದಾಯ ತೆರಿಗೆ ಉಪ ಆಯುಕ್ತ ಸೌರಭ್‌ ನಾಯಕ್ (ತನಿಖೆ) ಹಾಗೂ ಸಹಾಯಕ ಆಯುಕ್ತ ಡಿ.ಕುಮಾರ್ ಅವರಿಗೆ ಸೇರಿದ ಎರಡು ಸ್ಥಳಗಳು ಸೇರಿದಂತೆ ಬೆಂಗಳೂರಿನಲ್ಲಿ ಐದು ಕಡೆಗಳಲ್ಲಿ ಶೋಧ ನಡೆಸಲಾಯಿತು’ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

‘ನಾಯಕ್ ಹಾಗೂ ಕುಮಾರ್ ಇಬ್ಬರೂ ಐಎಂಎ ಮುಖ್ಯಸ್ಥ ಮನ್ಸೂರ್ ಖಾನ್‌ಗೆ ನೆರವು ನೀಡಿರುವ ಶಂಕೆ ಇದೆ. 2017ರಲ್ಲಿಯೇ ಇವರು ಐಎಂಎ ಕಚೇರಿಗಳಲ್ಲಿ ಶೋಧ ನಡೆಸಿ, ಲೆಕ್ಕಪತ್ರ ಪರಿಶೀಲಿಸಿದ್ದಾರೆ.

ದೊಡ್ಡ ಮೊತ್ತದ ನಗದು ಸ್ವೀಕರಿಸಿರುವುದು ಲೆಕ್ಕಪತ್ರ ದಾಖಲೆಗಳಲ್ಲಿ ಉಲ್ಲೇಖವಾಗಿದ್ದರೂ ಈ ಕುರಿತು ನಿರ್ಲಕ್ಷ ತೋರಿದ್ದಾರೆ. ಅಕ್ರಮ ಕುರಿತು ಕ್ರಮ ಕೈಗೊಂಡಿಲ್ಲ. ಇದಕ್ಕಾಗಿ ಅಧಿಕಾರಿಗಳಿಗೆ ಖಾನ್ ದೊಡ್ಡ ಮೊತ್ತದ ಲಂಚ ನೀಡಿರುವ ಸಂಶಯ ಇದೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು