ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕೊರಿಯಾ ನಾಗರಿಕರಿಗೆ ಭಾರತದಿಂದ ವೀಸಾ ಅರೈವಲ್‌ ಸೇವೆ

2018ರ ಅಕ್ಟೋಬರ್‌ 1ರಿಂದಲೇ ಜಾರಿ
Last Updated 10 ಡಿಸೆಂಬರ್ 2018, 6:59 IST
ಅಕ್ಷರ ಗಾತ್ರ

ನವದೆಹಲಿ: ದಕ್ಷಿಣ ಕೊರಿಯಾದ ನಾಗರಿಕರು ಭಾರತಕ್ಕೆ ಬಂದಿಳಿಯುತ್ತಿದ್ದಂತೆಯೇ ವೀಸಾ ಸೌಲಭ್ಯ (ವೀಸಾ ಆನ್‌ ಅರೈವಲ್‌) ನೀಡಲು ಮುಂದಾಗಿದೆ. ಈ ನಿರ್ಧಾರದಿಂದ ದೇಶಕ್ಕೆ ಉದ್ಯಮಿಗಳು ಮತ್ತು ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆಯಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2016ರ ಮಾರ್ಚ್‌ ತಿಂಗಳಿಂದಲೇ ಜಪಾನ್‌ ನಾಗರಿಕರಿಗೆ ಈ ಸೌಲಭ್ಯ ನೀಡಲಾಗುತ್ತಿತ್ತು. ದಕ್ಷಿಣ ಕೊರಿಯಾದ ನಾಗರಿಕರಿಗೆ 2018ರ ಅಕ್ಟೋಬರ್‌ 1ರಿಂದಲೇ ಪೂರ್ವಾನ್ವಯವಾಗುವಂತೆ ಈ ಸೇವೆಯನ್ನು ಜಾರಿಗೆ ತರಲಾಗಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್‌ ಹಾಗೂ ಕೋಲ್ಕತ್ತಾ ವಿಮಾನನಿಲ್ದಾಣಗಳನ್ನು ಈ ಸೇವೆಗೆ ಗೊತ್ತುಪಡಿಸಲಾಗಿದೆ. ಪ್ರವಾಸ, ಕಾರ್ಯಾಗಾರ, ವೈದ್ಯಕೀಯ ಹಾಗೂ ಉದ್ಯಮ ಸಂಬಂಧ60 ದಿನಕ್ಕೆ ಮೀರದಂತೆ ಈ ಸೌಲಭ್ಯ ನೀಡಲಾಗುತ್ತದೆ.

ಅಂದಾಜಿನ ಪ್ರಕಾರ, ಪ್ರತಿ ವರ್ಷ ದಕ್ಷಿಣ ಕೊರಿಯಾದ 2 ಲಕ್ಷ ಮಂದಿ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ದೆಹಲಿಗೆ ಪ್ರತೀ 600 ಮಂದಿ ದಕ್ಷಿಣ ಕೊರಿಯಾ ನಾಗರಿಕರು ಬಂದಿಳಿಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT