ಗುರುವಾರ , ಫೆಬ್ರವರಿ 27, 2020
19 °C
ಪರಮಾಣು ಕಾರ್ಯಕ್ರಮದ ಸೂಕ್ಷ್ಮ ಮಾಹಿತಿ ಕಳ್ಳತನ

ಪರಮಾಣು ಮಾಹಿತಿ ಕಳ್ಳತನ ವಿವರಕ್ಕೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪರಮಾಣು ಕಾರ್ಯಕ್ರಮಗಳನ್ನು ಕುರಿತ ಸೂಕ್ಷ್ಮ ಮಾಹಿತಿ ಹಾಗೂ ಉಪಕರಣಗಳನ್ನು ಪಾಕಿಸ್ತಾನಕ್ಕೆ ಕಳ್ಳಸಾಗಣೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಅಮೆರಿಕವು ನಡೆಸಿದ ತನಿಖೆಯ ವಿವರಗಳನ್ನು ಹಂಚಿಕೊಳ್ಳುವಂತೆ ಟ್ರಂಪ್‌ ಆಡಳಿತಕ್ಕೆ ಮನವಿ ಸಲ್ಲಿಸಲು ಭಾರತ ನಿರ್ಧರಿಸಿದೆ.

ಅಮೆರಿಕದ ಪರಮಾಣು ಕಾರ್ಯಕ್ರಮಗಳ ಅತ್ಯಾಧುನಿಕ ಉಪಕರಣಗಳು ಮತ್ತು ತಂತ್ರಜ್ಞಾನದ ಅಕ್ರಮ ಸಾಗಣೆಗೆ ಸಂಬಂಧಿಸಿದಂತೆ ಪಾಕಿಸ್ತಾನದ ‘ಬ್ಯುಸಿನೆಸ್‌ ವರ್ಲ್ಡ್‌’ ಸಂಸ್ಥೆಯ 5 ಮಂದಿ ವಿರುದ್ಧ ಇತ್ತೀಚೆಗಷ್ಟೇ ಅಮೆರಿಕದಲ್ಲಿ ದೋಷಾರೋಪ ಮಾಡಲಾಗಿತ್ತು.

‘ಅಮೆರಿಕ ಹಾಗೂ ಇತರ ಪಾಶ್ಚಾತ್ಯ ರಾಷ್ಟ್ರಗಳಿಂದ ಪರಮಾಣು ಉಪಕರಣಗಳು ಮತ್ತು ತಂತ್ರಜ್ಞಾನವನ್ನು ಅಕ್ರಮ ಮಾರ್ಗದಲ್ಲಿ ಪಡೆಯುವ ಪ್ರಯತ್ನವನ್ನು ಪಾಕಿಸ್ತಾನವು ನಡೆಸುತ್ತಲೇ ಇದೆ ಎಂಬ ಸಂದೇಹವು ಭಾರತಕ್ಕೆ ಹಿಂದಿನಿಂದಲೇ ಇತ್ತು. ಇದು ಭಾರತ ಹಾಗೂ ಈ ಭಾಗದ ಶಾಂತಿಗೆ ಅಪಾಯ ಒಡ್ಡುವಂಥ ಬೆಳವಣಿಗೆ’ ಎಂದು ಮೂಲಗಳು ತಿಳಿಸಿವೆ.

‘ಈ ಕಳ್ಳಸಾಗಣೆ ಜಾಲವು ಹೇಗೆ ಕೆಲಸ ಮಾಡುತ್ತಿತ್ತು ಎಂಬುದನ್ನು ತಿಳಿಯಲು ನಾವು ಇಚ್ಛಿಸುತ್ತೇವೆ’ ಎಂದು ಭಾರತ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು