ಭಾನುವಾರ, ಆಗಸ್ಟ್ 18, 2019
24 °C

ಬಿಳಿ ಬಾವುಟ ತೋರಿಸಿ, ಶವ ತಗೊಂಡು ಹೋಗಿ: ಪಾಕಿಸ್ತಾನಕ್ಕೆ ಸೇನೆಯ ಸೂಚನೆ

Published:
Updated:

ನವದೆಹಲಿ: ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಅಂತರರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ ಸಮೀಪ ಗುಂಡಿನ ಚಕಮಕಿಯಲ್ಲಿ ಮೃತಪಟ್ಟ ಪಾಕಿಸ್ತಾನೀಯರ ಶವಗಳನ್ನು ಸುರಕ್ಷಿತ ಸ್ಥಳಗಳಿಗೆ ಕೊಂಡೊಯ್ದು, ಅಂತಿಮ ಸಂಸ್ಕಾರ ನೆರವೇರಿಸಲು ಭಾರತೀಯ ಸೇನೆಯು ಅವಕಾಶ ಮಾಡಿಕೊಟ್ಟಿದೆ.

‘ಬಿಳಿ ಬಾವುಟ ಹಿಡಿದು ಬನ್ನಿ. ಐದು ಶವಗಳನ್ನು ತೆಗೆದುಕೊಂಡು ಹೋಗಿ, ಅಂತಿಮ ಸಂಸ್ಕಾರ ಮಾಡಿ’ ಭಾರತೀಯ ಸೇನೆಯು ಪಾಕ್ ಸೇನೆಗೆ ಸೂಚಿಸಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ. 

ಗಡಿ ನಿಯಂತ್ರಣ ರೇಖೆಗೆ ಹೊಂದಿಕೊಂಡಂತೆ ಇರುವ ದಟ್ಟಕಾಡಿನಲ್ಲಿ ಈ ಶವಗಳು ಪತ್ತೆಯಾಗಿವೆ. ಈ ಶವಗಳು ಪಾಕಿಸ್ತಾನದ ಭಯೋತ್ಪಾದಕರು ಅಥವಾ ವಿಶೇಷ ಕಾರ್ಯಪಡೆ ಸಿಬ್ಬಂದಿಯದ್ದು ಆಗಿರಬಹುದು ಎಂದು ಸೇನೆ ಹೇಳಿದೆ. ಸೇನೆಯ ಬಳಿ ನಾಲ್ಕು ಶವಗಳ ಫೋಟೊಗಳು ಇವೆ. ಇದು ದುರ್ಗಮ ಪ್ರದೇಶ. ಅಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಶವಗಳು ಇರಬಹುದು ಎಂದು ಸೇನೆ ಹೇಳಿದೆ.

ಭಾರತೀಯ ಸೇನೆಯ ಪ್ರಸ್ತಾವಕ್ಕೆ ಪಾಕ್ ಸೇನೆ ಈವರೆಗೂ ಪ್ರತಿಕ್ರಿಯಿಸಿಲ್ಲ. ಜಮ್ಮು ಮತ್ತು ಕಾಶ್ಮೀರದ ಗಡಿಗುಂಟ ಕಳೆದ ವಾರದಲ್ಲಿ ಒಳನುಸುಳುವ ಪ್ರಯತ್ನಗಳು ಹೆಚ್ಚಾಗಿದ್ದವು. ಕದನ ವಿರಾಮ ಉಲ್ಲಂಘನೆಯೂ ಅವ್ಯಾಹತ ಮುಂದುವರಿದಿತ್ತು.

ಸೇನೆಯು ಪರಿಸ್ಥಿತಿಯನ್ನು ವೃತ್ತಿಪರವಾಗಿ ಎದುರಿಸಿ ಭಾರತದೊಳಗೆ ನುಸುಳಲು ಕಾದು ನಿಂತಿದ್ದ ಭಯೋತ್ಪಾದಕರನ್ನು ಕೊಂದು ಹಾಕಿತ್ತು. ‘ತನ್ನ ನೆಲದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆ ನಿಗ್ರಹಿಸಲು ಗಮನ ಕೊಡದ ಪಾಕಿಸ್ತಾನ, ಭಾರತೀಯ ಸೇನೆಯ ದಾಳಿಯ ಬಗ್ಗೆ ಅಪಪ್ರಚಾರ ನಡೆಸುತ್ತಿದೆ’ ಎಂದು ಸೇನೆಯ ಉನ್ನತ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

ಇನ್ನಷ್ಟು... 

ಉಗ್ರರ ದಾಳಿ ಸಾಧ್ಯತೆ; ಯಾತ್ರಿಕರು ಕೂಡಲೇ ಮರಳುವಂತೆ ಜಮ್ಮು–ಕಾಶ್ಮೀರ ಸರ್ಕಾರ ಸಲಹೆ 

ಕಾಶ್ಮೀರ: ಸನ್ನದ್ಧ ಸ್ಥಿತಿಯಲ್ಲಿ ವಾಯುಪಡೆ, ಆಹಾರ ಖರೀದಿಗೆ ಮುಗಿಬೀಳುತ್ತಿರುವ ಜನ 

ಇಲ್ಲಿ ಏನಾಗುತ್ತಿದೆ? ಕೇಂದ್ರ ಪ್ರತಿಕ್ರಿಯಿಸಲಿ–ಓಮರ್‌ ಅಬ್ದುಲ್ಲಾ 

ಉಗ್ರರ ಕುಲುಮೆ | ಇಸ್ಲಾಮಿಕ್ ಸ್ಟೇಟ್ ಮಾದರಿಯಲ್ಲಿ ಕ್ರಿಯಾಶೀಲವಾಗಿರುವ ಜೈಷ್‌–ಎ– ಮೊಹಮ್ಮದ್‌ ಸಂಘಟನೆ

Post Comments (+)