ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಾಕಿಸ್ತಾನದಿಂದ ಹೊರಡುವ ಮೊದಲು ಗಿಡನೆಟ್ಟೆ’: ವೈರಲ್ ಆಯ್ತು ಹೈಕಮಿಷನರ್ ಟ್ವೀಟ್

Last Updated 13 ಆಗಸ್ಟ್ 2019, 4:51 IST
ಅಕ್ಷರ ಗಾತ್ರ

ಬೆಂಗಳೂರು:‘ಪಾಕಿಸ್ತಾನದಿಂದ ಹೊರಡುವ ಮೊದಲು ಭಾರತೀಯ ದೂತವಾಸ ಕಚೇರಿ ಆವರಣದಲ್ಲಿ ಉತ್ತಮ ಭವಿಷ್ಯಕ್ಕಾಗಿ ಗಿಡವೊಂದನ್ನು ನೆಟ್ಟೆ’ ಎಂದುಪಾಕಿಸ್ತಾನದಲ್ಲಿದ್ದ ಭಾರತದ ಹೈಕಮಿಷನರ್ ಅಜಯ್ ಬಿಸಾರಿಯಾ ಟ್ವೀಟ್ ಮಾಡಿದ್ದಾರೆ. ಎರಡೂ ದೇಶಗಳ 814 ಮಂದಿಅದನ್ನು ರಿಟ್ವೀಟ್ ಮಾಡಿಕೊಂಡಿದ್ದಾರೆ. 5,600 ಮಂದಿ ಲೈಕ್ ಮಾಡಿದ್ದಾರೆ.

‘ಮಹಾತ್ಮ ಗಾಂಧಿ ಅವರ 150ನೇ ಜನ್ಮಶತಮಾನೋತ್ಸವದ ಪ್ರಯುಕ್ತ ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ವಸತಿ ಸಂಕೀರ್ಣದ ಆವರಣದಲ್ಲಿ 150 ಗಿಡಗಳನ್ನು ನೆಡಲು ಯೋಚಿಸಿದ್ದೆವು. 150ನೇ ಗಿಡವನ್ನು ಭಾರತದ ಹೈಕಮಿಷನರ್ ಅಜಯ್ ಬಿಸಾರಿಯಾ ನೆಟ್ಟರು’ ಎಂದು ಪಾಕಿಸ್ತಾನದ ಭಾರತೀಯ ದೂತಾವಾಸ ಕಚೇರಿ ಮಾಡಿದ್ದ ಟ್ವೀಟ್ ಅನ್ನು ರಿಟ್ವೀಟ್ ಮಾಡಿದ್ದ ಬಿಸಾರಿಯಾ ಹೊಸ ಒಕ್ಕಣೆ ಬರೆದಿದ್ದರು.

ಪಾಕಿಸ್ತಾನವು ರಾಜತಾಂತ್ರಿಕ ಸಂಬಂಧ ಕಡಿದುಕೊಳ್ಳಲು ನಿರ್ಧರಿಸಿ ಬಿಸಾರಿಯಾ ಅವರಿಗೆ ದೇಶಬಿಟ್ಟು ತೆರಳುವಂತೆ ಸೂಚಿಸಿತ್ತು. ಅನಂತರ ಭಾರತೀಯ ದೂತಾವಾಸದ ಸಿಬ್ಬಂದಿ ಭಾರತಕ್ಕೆ ಹಿಂದಿರುಗಿದ್ದರು.

ಪಾಕಿಸ್ತಾನದ ಜನರಿಗೆ ಟ್ವಿಟರ್‌ನಲ್ಲಿಯೇ ಬಿಸಾರಿಯಾ ‘ಈದ್ ಮುಬಾರಕ್’ ಹೇಳಿದ್ದಾರೆ. ‘ಈ ಪವಿತ್ರ ದಿನದಂದು ನಿಮಗೆಶಾಂತಿ, ಸೌಹಾರ್ದ ಮತ್ತು ಸಂತಸ ಸಿಗಲೆಂದು ಹಾರೈಸುತ್ತೇನೆ. ದೆಹಲಿಯಿಂದ ಶುಭಾಶಯಗಳು’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಬಿಸಾರಿಯಾ ಅವರು ಪಾಕಿಸ್ತಾನದಲ್ಲಿ 1 ವರ್ಷ, 8ತಿಂಗಳು ಕಾರ್ಯನಿರ್ವಹಿಸಿದ್ದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT