ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇಂದಲ್ಲ ನಾಳೆ ನೀವು ಸಾಧಿಸುತ್ತೀರಿ’ ಇಸ್ರೋ ಬೆಂಬಲಕ್ಕೆ ನಿಂತ ಭಾರತೀಯರು

ಅಕ್ಷರ ಗಾತ್ರ

ಬೆಂಗಳೂರು: ಚಂದ್ರಯಾನ–2 ಉಡ್ಡಯನವನ್ನು ಸೋಮವಾರ ನಸುಕಿನ 2 ಗಂಟೆಯಲ್ಲಿತಾಂತ್ರಿಕ ಲೋಪ ಪತ್ತೆಯಾದ ಹಿನ್ನೆಲೆಯಲ್ಲಿಕೊನೇ ಗಳಿಗೆಯಲ್ಲಿ ಇಸ್ರೋಮುಂದೂಡಿದ್ದು ನಿಮಗೆ ಗೊತ್ತೇ ಇದೆ. ಇಸ್ರೋ ನಿರ್ಧಾರವನ್ನು ನೆಟ್ಟಿಗರು ಸ್ವಾಗತಿಸಿದ್ದಾರೆ. ‘ವಿಜ್ಞಾನಿಗಳ ಸಾಮರ್ಥ್ಯದ ಮೇಲೆ ನಮಗೆ ನಂಬಿಕೆ ಇದೆ. ಇಂದಲ್ಲನಾಳೆ ನೀವು ಸಾಧಿಸುತ್ತೀರಿ. ನಾವು ನಿಮ್ಮೊಡನೆ ಇದ್ದೇವೆ, ಇರುತ್ತೇವೆ’ ಎಂದು ಹಲವರು ಟ್ವೀಟ್ ಮಾಡಿದ್ದಾರೆ.

ಉಡ್ಡಯನ ವಾಹನದಲ್ಲಿ ಕೊನೆಯ ಗಳಿಗೆಯಲ್ಲಿ ತಾಂತ್ರಿಕ ಲೋಪ ಪತ್ತೆಯಾದ ಕಾರಣ ಉಡ್ಡಯನಕ್ಕೆ 56 ನಿಮಿಷಗಳ ಮೊದಲು ಕೌಂಟ್‌ಡೌನ್ ನಿಲ್ಲಿಸಲಾಯಿತು ಎಂದು ಇಸ್ರೋ ಟ್ವೀಟ್ ಮಾಡಿತ್ತು. ಇಸ್ರೋ ತೆಗೆದುಕೊಂಡ ಈ ನಿರ್ಧಾರದಿಂದ ಭಾರತೀಯರು ವಿಚಲಿತರಾದಂತೆ ಕಂಡುಬರಲಿಲ್ಲ.

‘ತಾಂತ್ರಿಕ ತಂಡವು ದೊಡ್ಡ ಕೆಲಸ ಮಾಡಿದೆ. ಸಕಾಲದಲ್ಲಿ ಲೋಪ ಪತ್ತೆ ಹಚ್ಚಿದ್ದರಿಂದ ಒಳ್ಳೆಯದೇ ಆಯಿತು. ಇಸ್ರೋ ತಂಡ ಅದನ್ನು ಶೀಘ್ರ ಪರಿಹರಿಸಲಿದೆ ಎನ್ನುವುದು ನನ್ನ ಆಶಯ. ಉಡ್ಡಯನದ ಹೊಸ ದಿನಾಂಕ ಮತ್ತು ಸಮಯದ ಘೋಷಣೆಗಾಗಿ ಕಾತರದಿಂದ ಕಾಯುತ್ತಿದ್ದೇನೆ’ ಎಂದು ಆನಂದ್ ಶ್ರೀನಿವಾಸನ್ ಇಸ್ರೋ ಟ್ವಿಟರ್ ಪುಟದಲ್ಲಿ ರಿಪ್ಲೈ ಮಾಡಿದ್ದಾರೆ.

ರೀಟಾ ಸಿಂಗ್ ಎನ್ನುವ ಮತ್ತೋರ್ವ ಟ್ವಿಟರ್‌ ಬಳಕೆದಾರರು, ಶ್ರೀನಿವಾಸನ್ ಅವರ ಭಾವನೆಗಳನ್ನೇ ಧ್ವನಿಸಿದ್ದಾರೆ. ‘ಇಸ್ಟ್ರೋ ಟೀಂಗೆ ಒಳ್ಳೇದಾಗಲಿ. ಯೋಜನೆ ಕಾರ್ಯರೂಪಕ್ಕೆ ಬರುವುದು ತಡವಾದರೆ ಪರವಾಗಿಲ್ಲ. ಅದುಕ್ಷಮೆ ಕೇಳುವುದಕ್ಕಿಂತ ಒಳ್ಳೇದು. ಮುಂದಿನ ದಿನಾಂಕವನ್ನು ಎದುರು ನೋಡುತ್ತಿರುತ್ತೇವೆ’ ಎನ್ನುವುದು ಅವರ ಮಾತು.

‘ನಾವೆಲ್ಲರೂ ಸದಾ ನಿಮ್ಮ ಜೊತೆಗೆ ಇದ್ದೇವೆ. ಯೋಚಿಸಬೇಡಿ. ನಿಮಗೆ ಎಷ್ಟು ಸಮಯಬೇಕೋ ಅಷ್ಟು ತಗೊಳಿ. ಚಂದ್ರನ ಮೇಲೆ ನಮ್ಮ ದೇಶದ ಉಪಕರಣಗಳನ್ನು ಯಶಸ್ವಿಯಾಗಿ ಇಳಿಸಿ’ ಎನ್ನುವುದು ಆರ್ಯನ್ ರಾಜ್ ಅವರ ಪ್ರತಿಕ್ರಿಯೆ.

‘ಪರವಾಗಿಲ್ಲ ಬಿಡಿ ಸ್ವಾಮಿ. ನೀವು ವಿಶ್ವದ ಅತ್ಯುತ್ತಮ ವಿಜ್ಞಾನಿಗಳು. ನಿಮ್ಮ ನಿರ್ಧಾರದ ಮೇಲೆ ನಮಗೆ ಭರವಸೆ ಇದೆ. ಕೊನೆಯ ಗಳಿಗೆಯಲ್ಲಿ ಉಡ್ಡಯನ ಮುಂದೂಡುವುದು ಸಾಮಾನ್ಯ ನಿರ್ಧಾರವಲ್ಲ. ಇಷ್ಟು ವರ್ಷಗಳ ಪರಿಶ್ರಮ ಹಾಳಾಗುವುದರ ಬದಲು ಮುಂದಕ್ಕೆ ಹೋಗಿದ್ದು ಒಳ್ಳೇದಾಯ್ತು.ಆದ್ರೂ ಸ್ವಲ್ಪ ನಿರಾಸೆಯಾಗಿದ್ದು ನಿಜ. ನಾವು ಕಾಯ್ತೀವಿ. ಸದಾ ನಿಮಗೆ ಬೆಂಬಲ ನೀಡ್ತೀವಿ’ ಎಂದು ಹಲವರು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT