ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಾಥ ಮೈರಾಳಿಗೆ ಕುಟುಂಬ ಹುಡುಕಿಕೊಡಿ ಎಂದು ಮನವಿ ಮಾಡಿದ ರತನ್‌ ಟಾಟಾ

Last Updated 26 ನವೆಂಬರ್ 2019, 3:04 IST
ಅಕ್ಷರ ಗಾತ್ರ

ಸ್ವಂತ ಕುಟುಂಬವಿಲ್ಲದ9 ತಿಂಗಳು ವಯಸ್ಸಿನ ಮೈರಾ ಎಂಬ ಶ್ವಾನವನ್ನು ದತ್ತು ಪಡೆಯಲು ಕೈಗಾರಿಕೋದ್ಯಮಿ ರತನ್‌ ಟಾಟಾ ಅವರು ಮನವಿ ಮಾಡಿದ್ದಾರೆ. ಲ್ಯಾಬ್ರಡಾರ್ ತಳಿಗೆ ಸೇರುವ ಮೈರಾ ಎಂಬ ಶ್ವಾನವು ಮಾಲಕರಿಲ್ಲದೇ ಏಕಾಂಗಿಯಾಗಿದೆ. ಆ ಕಾರಣ, ಮುಂಬೈನಲ್ಲಿ ಕುಟುಂಬ ಹುಡುಕಲು ಮೈರಾಳಿಗೆ ಸಹಾಯ ಮಾಡುವಂತೆ ಟಾಟಾ ಅವರು ತಮ್ಮ ಇನ್‌ಸ್ಟಾಗ್ರಾಂ ಪಾಲೋವರ್ಸ್‌ಗೆ ಕೇಳಿಕೊಂಡಿದ್ದಾರೆ.

"ಇಂದು ಪ್ರಾಣಿಗಳು ವಿಭಿನ್ನ ರೀತಿಯ ನೋವುಗಳಿಗೆ ಒಳಗಾಗುತ್ತಿವೆ. ಆದರೆ, ಕುಟುಂಬದಿಂದ ದೂರವಾದ ಪ್ರಾಣಿಗಳನ್ನು ನೋಡಿದಾಗ ನಿಜವಾಗಿಯೂ ನನ್ನ ಹೃದಯ ಒಡೆದುಹೋಗುತ್ತದೆ," ಎಂದು ಬರೆಯುವ ಮೂಲಕ ಟಾಟಾ ಅವರು ಮೈರಾಳನ್ನು ಪರಿಚಯಿಸಿದ್ದಾರೆ.

"ಕುಟುಂಬದಿಂದ ದೂರವಾದರೂ 9 ತಿಂಗಳ ಮೈರಾಳ ಕಣ್ಣಲ್ಲಿ ದಯಾಳುತನ ಕಾಣುತ್ತದೆ. ಅವಳಿಗೆ ಕುಟುಂಬ ಹುಡುಕಿಕೊಡಲು ನಾನು ನಿಮ್ಮ ಸಹಾಯ ಬೇಡುತ್ತೇನೆ,’ ಎಂದು ತಮ್ಮ ಪಾಲೋವರ್ಸ್‌ಗೆ ಟಾಟಾ ಅವರು ಕೇಳಿಕೊಂಡಿದ್ದಾರೆ.

ಮೈರಾಳನ್ನು ದತ್ತು ಪಡೆಯಲು ಆಸಕ್ತಿ ಇದ್ದವರು ಪಾರ್ಮ್‌ನಲ್ಲಿ ತಮ್ಮ ವಿವರ ತುಂಬಬೇಕೆಂದು, ಪಾರ್ಮ್‌ ಒಂದನ್ನು ಸಹ ಹಂಚಿಕೊಂಡಿದ್ದಾರೆ. "ಟಾಟಾ ಅವರ ಗಮನ ಸೆಳೆಯಲು ದಯವಿಟ್ಟು ಮೈರಾಳನ್ನು ದತ್ತು ಪಡೆಯಲು ಪ್ರಯತ್ನಿಸಬೇಡಿ,’ ಎಂದು ಹೇಳಿದ್ದಾರೆ. ದತ್ತು ಪಡೆದ ನಂತರ ಮೈರಾಳನ್ನು ತೋಟದ ಮನೆಯಲ್ಲಿ ವಾಸಿಸಲು ಬಿಡದೇ, ಕುಟುಂಬದೊಂದಿಗೆ ಇಟ್ಟುಕೊಳ್ಳುಬೇಕೆಂದು ಟಾಟಾ ಅವರು ಕರಾರು ಮಾಡಿದ್ದಾರೆ.

ಟಾಟಾ ಅವರು ಹಂಚಿಕೊಂಡ ಪೋಸ್ಟ್‌ಗೆ 213160 ಲೈಕ್ಸ್‌ಗಳು, ಸಾವಿರಕ್ಕೂ ಅಧಿಕ ಕಾಮೆಂಟ್‌ಗಳು ಬಂದಿವೆ. ಶ್ವಾನವನ್ನು ದತ್ತು ಸ್ವೀಕರಿಸಲು ಜನರು ಮುಂದೆ ಬಂದದ್ದು, ಟಾಟಾ ಅವರ ಪ್ರಾಣಿ ಪ್ರೀತಿಯನ್ನು ಹೊಗಳಿದ್ದಾರೆ. ‘ನೀವು ನಮ್ಮೆಲ್ಲರ ಸ್ಪೂರ್ತಿ. ನಿಮ್ಮ ಸುತ್ತಲಿರುವ ಜನರಿಗೆ ಸ್ಪೂರ್ತಿ ತುಂಬುವುದನ್ನು ಮುಂದುವರಿಸಿ,’ ‘ಬಂಗಾರದ ಹೃದಯ ಹೊಂದಿರುವ ಮನುಷ್ಯ ನೀವು,’ ಎಂಬ ಪ್ರತಿಕ್ರಿಯೆಗಳು ಟಾಟಾ ಅವರ ಪೋಸ್ಟ್‌ಗೆ ವ್ಯಕ್ತವಾಗಿವೆ.

ರತನ್‌ ಟಾಟಾ ಅವರು ಶ್ವಾನಗಳ ಮೇಲೆ ಹೊಂದಿರುವ ಕಾಳಜಿ ಎಲ್ಲರಿಗೂ ತಿಳಿದೇ ಇದೆ. ಈ ಹಿಂದೆ ಅವರು ತಮ್ಮ ಪ್ರೀತಿಪಾತ್ರ ‘ಟಿಟೋ’ ಎಂಬ ಶ್ವಾನದ ಮೊದಲ ವರ್ಷದ ಜನ್ಮದಿನಕ್ಕೆ ಶುಭಾಶಯ ಕೋರಿ ಸಾಮಾಜಿಕ ಜಾಲತಾಣಗಳಲ್ಲಿ ಬರಹವೊಂದನ್ನು ಹಂಚಿಕೊಂಡಿದ್ದರು.

ಟಾಟಾರ ಶ್ವಾನ ಪ್ರೀತಿ ನಮಗೆ ಆದರ್ಶವಾಗಲಿ:

ರತನ್‌ ಟಾಟಾ ಅವರ ಶ್ವಾನ ಪ್ರೀತಿ ನಮ್ಮೆಲ್ಲರಿಗೂ ಆದರ್ಶವಾಗಬೇಕಿದೆ. ನಾವು ವಾಸಿಸುವಮನೆ, ನಾವು ಕೆಲಸ ಮಾಡುವ ಕಚೇರಿ ಸುತ್ತಮುತ್ತ ದೇಶಿ ತಳಿಯ ಶ್ವಾನಗಳು ಅನಾಥವಾಗಿ ಅಲೆದಾಡುತ್ತಿರುವುದನ್ನು ನಾವು ಗಮನಿಸುತ್ತಿರುತ್ತೇವೆ. ಅವುಗಳನ್ನು ಬೀದಿ ನಾಯಿಗಳೆಂದು ತಿರಸ್ಕಾರ ಮನೋಭಾವನೆಯಿಂದ ನೋಡದೇ, ಅವುಗಳಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡಬೇಕಿದೆ. ಅವುಗಳನ್ನು ಅಳವಡಿಸಿಕೊಳ್ಳುವ ಅಥವಾ ಶ್ವಾನಗೃಹಗಳಿಗೆ ಒಪ್ಪಿಸುವ ಕೆಲಸ ನಮ್ಮಿಂದ ನಡೆಯಬೇಕಿದೆ. ಸಾವಿರಾರು ರೂಪಾಯಿಖರ್ಚು ಮಾಡಿ ವಿದೇಶಿ ತಳಿಯ ಶ್ವಾನಗಳನ್ನು ಕೊಂಡುಕೊಳ್ಳುವ ಬದಲು ಇಲ್ಲೇ ಇರುವ ದೇಶಿ ತಳಿಯ ಶ್ವಾನಗಳ ಕಡೆಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ. ವಿದೇಶಿ ಶ್ವಾನಗಳಂತೆಭಾವನಾತ್ಮಕ ಸ್ಪಂದನೆಗಳಿಗೆ ಮಿಡಿಯುವ ಶಕ್ತಿ ದೇಶಿ ತಳಿಯ ಶ್ವಾನಗಳಿಗೂ ಇದೆ ಎಂಬುದು ನಮಗೆ ಅರ್ಥವಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT