ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಸ್ತು ಪೂರ್ಣಗೊಳಿಸಿದ ವೈರಿಯ ಹಂತಕ ‘ಅರಿಹಂತ್’

Last Updated 5 ನವೆಂಬರ್ 2018, 11:34 IST
ಅಕ್ಷರ ಗಾತ್ರ

ನವದೆಹಲಿ: ಸಂಪೂರ್ಣ ದೇಶೀಯವಾಗಿ ನಿರ್ಮಿಸಲಾದ ಅಣ್ವಸ್ತ್ರ ಸಜ್ಜಿತ ಜಲಾಂತರ್ಗಾಮಿ ಐಎನ್‌ಎಸ್‌ ಅರಿಹಂತ್‌ ಮೊದಲ ‘ದಾಳಿ ತಡೆ ಗಸ್ತ’ನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಮೊದಲ ಸುತ್ತು ಪೂರ್ಣಗೊಳಿಸಿ ಹಿಂದಿರುಗಿದ ಅರಿಹಂತ್‌ ಸಿಬ್ಬಂದಿಯನ್ನು ಪ್ರಧಾನಿ ನರೇಂದ್ರ ಮೋದಿ ಬರಮಾಡಿಕೊಂಡರು ಎಂದು ಪ್ರಧಾನಿ ಕಚೇರಿ ತಿಳಿಸಿದೆ. ಜಲಾಂತರ್ಗಾಮಿಯ ಗಸ್ತು ಪೂರ್ಣಗೊಂಡದ್ದು ಯಾವಾಗ ಎಂಬ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಸುಮಾರು ಮೂರು ದಶಕಗಳ ಗೋಪ್ಯ ಸಂಶೋಧನೆಯ ಬಳಿಕ ಐಎನ್‌ಎಸ್‌ ಅರಿಹಂತ್‌ ರೂಪುಗೊಂಡಿದೆ. ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿಯೇ ಈ ಜಲಾಂತರ್ಗಾಮಿಯನ್ನು ಸಾಗರಕ್ಕೆ ಇಳಿಸಲಾಗಿತ್ತು. ಇದನ್ನು ಸೇವೆಗೆ ಸೇರಿಸಿಕೊಂಡಿರುವ ವಿವರವನ್ನು ಈವರೆಗೆ ಬಹಿರಂಗಪಡಿಸಿಲ್ಲ.

ಸಾಮರ್ಥ್ಯವೇನು?

* ಸಮುದ್ರದ ಆಳದಿಂದಲೇಕ್ಷಿಪಣಿ ದಾಳಿ ನಡೆಸುವ ಸಾಮರ್ಥ್ಯ

* ಶತ್ರು ದೇಶದ ಕರಾವಳಿಯ ಸಮೀಪದವರೆಗೆ ಹೋಗುವ ಶಕ್ತಿ

* ನೀರಿನೊಳಗೆ ಸುಳಿವು ಬಿಟ್ಟುಕೊಡದೆ ದೀರ್ಘಕಾಲ ಇರಬಲ್ಲುದು

ಎರಡು ವಿಧದಕ್ಷಿಪಣಿಗಳು

* 700 ಕಿ.ಮೀ. ದೂರಕ್ಕೆ ಹಾರಬಲ್ಲ ಅಲ್ಪದೂರ ಕ್ಷಿಪಣಿ

* 3,500 ಕಿ.ಮೀ. ದೂರಕ್ಕೆ ದಾಳಿ ನಡೆಸಬಲ್ಲ ದೀರ್ಘ ದೂರ ಕ್ಷಿಪಣಿ

ಬೇರೆ ಯಾರಿಗೆ ಈ ಶಕ್ತಿ ಇದೆ?

* ಅಮೆರಿಕ, ರಷ್ಯಾ, ಚೀನಾ, ಇಂಗ್ಲೆಂಡ್‌, ಫ್ರಾನ್ಸ್‌ ದೇಶಗಳು ಭೂಮಿ, ಆಕಾಶ ಮತ್ತು ಸಾಗರದಿಂದ ದಾಳಿ ನಡೆಸುವ ಸಾಮರ್ಥ್ಯ ಹೊಂದಿವೆ

* ಚೀನಾವು 2015ರಿಂದಲೇ ಅಣ್ವಸ್ತ್ರಸಜ್ಜಿತ ಜಲಾಂತರ್ಗಾಮಿ ಗಸ್ತು ಆರಂಭಿಸಿದೆ ಎಂಬ ವರದಿಗಳಿವೆ

* ಜಲಾಂತರ್ಗಾಮಿಯಿಂದ ದಾಳಿ ನಡೆಸುವ ಸಾಮರ್ಥ್ಯದ ಬಾಬರ್‌ ಕ್ಷಿಪಣಿಯನ್ನು ಪಾಕಿಸ್ತಾನ ಕಳೆದ ವರ್ಷ ಪರೀಕ್ಷಿಸಿದೆ

ಅನುಕೂಲ ಏನು?

ಮೊದಲು ಅಣ್ವಸ್ತ್ರ ಬಳಸುವುದಿಲ್ಲ ಎಂಬ ನೀತಿಯನ್ನು ಭಾರತ ಅನುಸರಿಸುತ್ತಿದೆ. ನಮ್ಮ ನೆರೆಯ ದೇಶಗಳಾದ ಪಾಕಿಸ್ತಾನ ಮತ್ತು ಚೀನಾ ಅಣ್ವಸ್ತ್ರಗಳನ್ನು ಹೊಂದಿವೆ ಮತ್ತು ಈ ದೇಶಗಳ ಜತೆಗೆ ಗಡಿ ಮತ್ತು ಇತರ ವಿಚಾರಗಳಲ್ಲಿ ಆಗಾಗ ಬಿಕ್ಕಟ್ಟುಗಳು ಎದುರಾಗುತ್ತಲೇ ಇವೆ. ಒಂದು ವೇಳೆ, ಯಾವುದಾದರೂ ದೇಶ ನಮ್ಮ ಮೇಲೆ ಅಣ್ವಸ್ತ್ರ ದಾಳಿ ನಡೆಸಿದರೆ, ನಮ್ಮ ಅಣ್ವಸ್ತ್ರಗಳು ನಾಶವಾದರೆ, ಸಾಗರ ತಳದಲ್ಲಿ ಯಾರ ಕಣ್ಣಿಗೂ ಬೀಳದೆ ಅಡಗಿರುವ ಈ ಜಲಾಂತರ್ಗಾಮಿಯಿಂದ ಪ್ರತಿದಾಳಿ ನಡೆಸಲು ಸಾಧ್ಯ. ಭೂಮಿ ಮತ್ತು ಆಕಾಶದಿಂದ ದಾಳಿ ನಡೆಸುವ ವ್ಯವಸ್ಥೆಯನ್ನು ವೈರಿಗಳು ಪತ್ತೆ ಹಚ್ಚುವುದು ಸುಲಭ. ಆದರೆ ಜಲಾಂತರ್ಗಾಮಿಯನ್ನು ಅಷ್ಟು ಸುಲಭದಲ್ಲಿ ಗುರುತಿಸಲಾಗದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT