ಅಂತರ್ಜಾಲ ಸ್ಥಗಿತ: ಭೀತಿ ದೂರ

7

ಅಂತರ್ಜಾಲ ಸ್ಥಗಿತ: ಭೀತಿ ದೂರ

Published:
Updated:
Deccan Herald

ನವದೆಹಲಿ: ದುರ್ಬಲಗೊಂಡಿರುವ ಮುಖ್ಯ ಡೊಮೇನ್‌ ಸರ್ವರ್‌ ಮತ್ತು ನಿಯಂತ್ರಣ ವ್ಯವಸ್ಥೆ ಜಾಲದ ದುರಸ್ತಿಯ ಕಾರಣಕ್ಕಾಗಿ ವಿಶ್ವದಾದ್ಯಂತ ಮುಂದಿನ 24 ತಾಸುಗಳಲ್ಲಿ ಸ್ವಲ್ಪ ಕಾಲ ಅಂತರ್ಜಾಲ ಸಂಪರ್ಕ ಸ್ಥಗಿತಗೊಳ್ಳಲಿದೆ ಅಥವಾ ವ್ಯತ್ಯಯವಾಗಲಿದೆ ಎಂಬ ‘ರಷ್ಯಾ ಟುಡೆ’ ಪತ್ರಿಕೆಯ ವರದಿ ಶುಕ್ರವಾರ ‌ಎಲ್ಲೆಡೆ ವೈರಲ್‌ ಆಗಿತ್ತು.

ಆದರೆ, ಅಂತರ್ಜಾಲ ನಿರ್ವಹಿಸುವ ದಿ ಇಂಟರ್‌ನೆಟ್‌ ಕಾರ್ಪೊರೇಷನ್ ಆಫ್‌ ಅಸೈನ್ಡ್‌ ನೇಮ್ಸ್‌ ಆ್ಯಂಡ್‌ ನಂಬರ್ಸ್‌ (ಐಸಿಎಎನ್‌ಎನ್‌) ಈ ವರದಿಯನ್ನು ತಳ್ಳಿ ಹಾಕಿದೆ.

ಅಂತರ್ಜಾಲ ದುರಸ್ತಿ ಕಾರ್ಯದಿಂದಾಗಿ ಬಳಕೆದಾರರಿಗೆ ತೊಂದರೆಯಾಗುವುದಿಲ್ಲ. ರೂಟ್‌ ಕೀ ಸೈನಿಂಗ್‌ ಕೀ (ಕೆಎಸ್‌ಕೆ) ಬದಲಾವಣೆ ಕಾರ್ಯ ಪ್ರಗತಿಯಲ್ಲಿದೆ. ಅಂತರ್ಜಾಲ ಸೇವೆಯ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ಭಾರತದಲ್ಲಿಯೂ ಶುಕ್ರವಾರ ಬೆಳಿಗ್ಗೆಯಿಂದ ಅಂತರ್ಜಾಲ ಸೇವೆ ಸ್ಥಗಿತಗೊಳ್ಳುವ ಬಗ್ಗೆ ವದಂತಿ ವ್ಯಾಪಕವಾಗಿತ್ತು. ಆದರೆ, ಅಂತಹ ತೊಂದರೆ ಕಾಣಿಸಿಕೊಳ್ಳಲಿಲ್ಲ.

ಹೆಚ್ಚುತ್ತಿರುವ ಸೈಬರ್‌ ದಾಳಿಗಳನ್ನು ತಡೆಯಲು ಐಸಿಎಎನ್‌ಎನ್‌ ಸಂಸ್ಥೆಯು ಡೊಮೇನ್‌ ನೇಮ್‌ ಸಿಸ್ಟಮ್‌ (ಡಿಎನ್‌ಎಸ್‌) ಅಥವಾ ಅಡ್ರೆಸ್ ಬುಕ್‌ನ ಕ್ರಿಪ್ಟೋಗ್ರಾಫಿಕ್‌ ಕೀ ಬದಲಾಯಿಸುತ್ತಿದೆ ಎಂದು ರಷ್ಯಾ ಮಾಧ್ಯಮ ಹೇಳಿತ್ತು.

ಅಂತರ್ಜಾಲ ಸಂಪರ್ಕ ವ್ಯತ್ಯಯದಿಂದ ವಿಶ್ವದಾದ್ಯಂತ ಅಂತರ್ಜಾಲ ಬಳಕೆದಾರರಿಗೆ ತೊಂದರೆಯಾಗಲಿದೆ. ಆದರೆ, ಮಾಹಿತಿ ಸೋರಿಕೆ, ಸೈಬರ್‌ ದಾಳಿ ತಡೆಯುವ ನಿಟ್ಟಿನಲ್ಲಿ ಬದಲಾವಣೆ ಅನಿವಾರ್ಯ ಎಂದು ಮಾಹಿತಿ ನಿಯಂತ್ರಣ ಪ್ರಾಧಿಕಾರದ (ಸಿಆರ್‌ಎ) ಪ್ರಕಟಣೆ ಹೇಳಿತ್ತು.

ಕ್ರಿಪ್ಟೋಗ್ರಾಫಿಕ್‌ ಕೀ ಬದಲಾವಣೆ ಬಹುತೇಕ ಕೊನೆಯ ಹಂತದಲ್ಲಿದೆ. ದತ್ತಾಂಶ ವಿಶ್ಲೇಷಣೆಯ ಪ್ರಕಾರ ಶೇ 99ಕ್ಕೂ ಹೆಚ್ಚು ಬಳಕೆದಾರರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಐಸಿಎಎನ್‌ಎನ್‌ ಅಭಯ ನೀಡಿದೆ. ಕ್ರಿಪ್ಟೋಗ್ರಾಫಿಕ್‌ ಕೀ ಬದಲಾವಣೆ ಬಗ್ಗೆ ಆಗಸ್ಟ್‌ನಲ್ಲಿಯೇ ಸಂಸ್ಥೆ ಘೋಷಿಸಿತ್ತು.

Tags: 

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !