ಮಂಗಳವಾರ, ಜನವರಿ 21, 2020
27 °C

ಜಮ್ಮು – ಕಾಶ್ಮೀರ ಇಂಟರ್‌ನೆಟ್‌ ಸೇವೆ ಭಾಗಶಃ ಆರಂಭ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ : ಜಮ್ಮುವಿನಲ್ಲಿ ಭಾಗಶಃ ಪ್ರದೇಶಗಳಲ್ಲಿ ಮೊಬೈಲ್‌ ಇಂಟರ್‌ನೆಟ್‌ ಮತ್ತು ಹೋಟೆಲ್, ಟ್ರಾವೆಲ್‌ ಸಂಸ್ಥೆಗಳು, ಆಸ್ಪತ್ರೆಗಳಿಗೆ ಅನ್ವಯಿಸಿ ಬ್ರಾಡ್‌ಬ್ಯಾಂಡ್‌ ಸೇವೆಯನ್ನು ಮಂಗಳವಾರದಿಂದ ಜಾರಿಗೆ ಬರುವಂತೆ ಒದಗಿಸಲಾಗಿದೆ.

ಗೃಹಸಚಿವಾಲಯವು ಈ ಸಂಬಂಧ ಆದೇಶ ಹೊರಡಿಸಿದ್ದು, ಕಾಶ್ಮೀರ ವಿಭಾಗದಲ್ಲಿ 400 ಇಂಟರ್‌ನೆಟ್‌ ಕಿಯೋಸ್ಕ್‌ಗಳನ್ನು ಸ್ಥಾಪಿಸಲಾಗುವುದು. ಅಗತ್ಯವಸ್ತುಗಳ ಸೇವೆ ಒದಗಿಸುವ ಸಂಸ್ಥೆಗಳು, ಆಸ್ಪತ್ರೆ, ಬ್ಯಾಂಕ್‌ ಮತ್ತು ಸರ್ಕಾರಿ ಕಚೇರಿಗಳಿಗೆ ಅನ್ವಯವಾಗುವಂತೆ ಬ್ರಾಡ್‌ಬ್ಯಾಂಡ್‌ ಸೇವೆಯನ್ನು ಇಂಟರ್‌ನೆಟ್‌ ಸೇವಾ ಸಂಸ್ಥೆಗಳು ಒದಗಿಸಲಿವೆ ಎಂದು ತಿಳಿಸಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು