ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ ಕಾರ್ಯತಂತ್ರ ಬದಲು: ಭಾರತ, ಶ್ರೀಲಂಕಾಕ್ಕೆ ಬೆದರಿಕೆ

Last Updated 20 ಜೂನ್ 2019, 20:41 IST
ಅಕ್ಷರ ಗಾತ್ರ

ತಿರುವನಂತಪುರ: ಸಿರಿಯಾ ಮತ್ತು ಇರಾಕ್‌ನಲ್ಲಿ ನೆಲೆ ಕಳೆದುಕೊಳ್ಳುತ್ತಿರುವ ಐಎಸ್‌ ಉಗ್ರರು ಹಿಂದೂ ಮಹಾಸಾಗರ ಪ್ರದೇಶದತ್ತ ಗಮನ ಹರಿಸಿದೆ. ಇದರಿಂದ ಭಾರತ ಮತ್ತು ಶ್ರೀಲಂಕಾಕ್ಕೆ ಬೆದರಿಕೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

‘ಕೇರಳದ ಕೊಚ್ಚಿಯ ಪ್ರಸಿದ್ಧ ಶಾಪಿಂಗ್‌ ಮಾಲ್‌ ಸೇರಿದಂತೆ ವಿವಿಧ ಸಂಸ್ಥೆಗಳು ಐಎಸ್‌ ಉಗ್ರರ ಗುರಿಗಳಾಗಬಹುದು’ ಎಂಬ ಮಾಹಿತಿಯನ್ನು 15 ದಿವಸಗಳ ಹಿಂದೆ ಪೊಲೀಸರು ವಿನಿಮಯ ಮಾಡಿಕೊಂಡಿದ್ದರು’ ಎಂದೂ ವರದಿಯಲ್ಲಿ ಹೇಳಲಾಗಿದೆ.

‘ಐಎಸ್‌ ಉಗ್ರರು ಸಂವಹನಕ್ಕಾಗಿ ಟೆಲಿಗ್ರಾಂ ಮೆಸೆಂಜರ್‌ ಅನ್ನು ಬಳಸುತ್ತಿದ್ದರು. ಆದರೆ ಮಾಹಿತಿ ಸೋರಿಕೆಯಾಗಬಹುದು ಎಂಬ ಭಯದಿಂದ ಈಗ ಚಾಟ್‌ಸೆಕ್ಯೂರ್‌, ಸಿಗ್ನಲ್‌ ಮತ್ತು ಸೈಲೆಂಟ್‌ ಟೆಕ್ಸ್ಟ್ ‌ಆ್ಯಪ್‌ಗಳನ್ನು ಬಳಸುತ್ತಿದ್ದಾರೆ’ ಎಂದೂ ಉನ್ನತ ಪೊಲೀಸ್‌ ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT