ಭಾನುವಾರ, ಆಗಸ್ಟ್ 18, 2019
25 °C

‘ಚಂದ್ರಯಾನ 2’ ಹೊಸ ಮುಹೂರ್ತ: ಸೋಮವಾರ ಮಧ್ಯಾಹ್ನ 2.43

Published:
Updated:

ಬೆಂಗಳೂರು: ಬಹುನಿರೀಕ್ಷಿತ ಚಂದ್ರಯಾನ 2 ಉಡಾವಣೆಯನ್ನು ಇಸ್ರೋ ಜುಲೈ 22ಕ್ಕೆ ಮರುನಿಗದಿಪಡಿಸಿದೆ. ಚಂದ್ರನ ಅಧ್ಯಯನಕ್ಕೆ ಭಾರತ ನಡೆಸುತ್ತಿರುವ ಈ ಮಹತ್ವದ ಉಡಾವಣೆಗೆ ಜುಲೈ 15ರ ನಸುಕಿನ 2.51ಕ್ಕೆ ಈ ಮೊದಲು ದಿನಾಂಕ ನಿಗದಿಯಾಗಿತ್ತು. ರಾಕೆಟ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ ಉಡಾವಣೆಯನ್ನು ಇಸ್ರೋ ಕೊನೆಯ ಗಳಿಗೆಯಲ್ಲಿ ಅನಿರ್ದಿಷ್ಟಾವಧಿಗೆ ಮುಂದೂಡಿತ್ತು.

ಇಂದು ಮುಂಜಾನೆ ಚಂದ್ರಯಾನ 2 ಸಂಬಂಧ ಟ್ವೀಟ್ ಮಾಡಿರುವ ಇಸ್ರೋ ಜುಲೈ 22ರ ಸೋಮವಾರ ಮಧ್ಯಾಹ್ನ 2.43ಕ್ಕೆ ಉಡಾವಣೆಯ ಸಮಯ ನಿಗದಿಪಡಿಸಿದೆ.

ಚಂದ್ರಯಾನ 2 ಉಡಾವಣೆಯನ್ನು ಕೊನೆಯ ಗಳಿಗೆಯಲ್ಲಿ ಅನಿವಾರ್ಯವಾಗಿ ಮುಂದೂಡಿದಾಗ ಬೆಂಬಲಕ್ಕೆ ನಿಂತ ಎಲ್ಲ ಭಾರತೀಯರಿಗೂ ಇಸ್ರೋ ಟ್ವೀಟ್‌ನಲ್ಲಿ ಕೃತಜ್ಞತೆ ಸಲ್ಲಿಸಿದೆ.

 

ಇನ್ನಷ್ಟು...

ಸುದೀರ್ಘ ಬರಹ: ಚಂದ್ರನೂರಿಗೆ ಮತ್ತೊಂದು ಯಾತ್ರೆ

ಚಂದ್ರಯಾನ–2ರ ಉಡ್ಡಯನ ರದ್ದು: ರಾಕೆಟ್‌ ವ್ಯವಸ್ಥೆಯಲ್ಲಿ ತಾಂತ್ರಿಕ ಸಮಸ್ಯೆ

Post Comments (+)