ರದ್ದಾದ ಕಾಯ್ದೆ ಬಳಕೆ: ‘ಸುಪ್ರೀಂ’ ಆಕ್ರೋಶ

7

ರದ್ದಾದ ಕಾಯ್ದೆ ಬಳಕೆ: ‘ಸುಪ್ರೀಂ’ ಆಕ್ರೋಶ

Published:
Updated:

ನವದೆಹಲಿ: ಈಗಾಗಲೇ ರದ್ದು ಮಾಡಲಾದ ಮಾಹಿತಿ ತಂತ್ರಜ್ಞಾನ ಕಾಯ್ದೆಯ 66 ಎ ಸೆಕ್ಷನ್‌ ಅಡಿಯಲ್ಲಿ ಆರೋಪಿಗಳನ್ನು ವಿಚಾರಣೆ ನಡೆಸುತ್ತಿರುವುದರ ಬಗ್ಗೆ ಸುಪ್ರೀಂ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ. ಅಂತರ್ಜಾಲದಲ್ಲಿ ‘ಇತರರ ಮನ ನೋಯಿಸುವ’ ವಿಚಾರಗಳನ್ನು ಪ್ರಕಟಿಸುವವರನ್ನು ಬಂಧಿಸಲು ಈ ಸೆಕ್ಷನ್‌ನಲ್ಲಿ ಅವಕಾಶ ಇತ್ತು.

ಸುಪ್ರೀಂ ಕೋರ್ಟ್‌ ರದ್ದು ಮಾಡಿರುವ ಈ ಸೆಕ್ಷನ್‌ ಅಡಿಯಲ್ಲಿ ಜನರನ್ನು ಬಂಧಿಸಿದರೆ ಅಂತಹ ಅಧಿಕಾರಿಗಳನ್ನು ಬಂಧಿಸಿ ಜೈಲಿಗಟ್ಟಬೇಕು ಎಂದು ನ್ಯಾಯಮೂರ್ತಿ ಆರ್‌.ಎಫ್‌. ನರಿಮನ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !