ಮಂಗಳವಾರ, ಸೆಪ್ಟೆಂಬರ್ 22, 2020
22 °C

ಶಶಿಕುಮಾರ್‌ ಅವರಂತಾಗಲು ರಾಯರನ್ನು ಪ್ರಾರ್ಥಿಸುತ್ತಿದ್ದ ಜಗ್ಗೇಶ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕನ್ನಡ ಚಿತ್ರರಂಗದ 90ರ ದಶಕದಲ್ಲಿ ಶಶಿಕುಮಾರ್‌ ಉತ್ತುಂಗದಲ್ಲಿದ್ದ ನಟ. ಆರಂಭದಲ್ಲಿ ಖಳನ ಪಾತ್ರಗಳನ್ನು ನಿರ್ವಹಿಸಿದ್ದ ಸ್ಪುರದ್ರೂಪಿ ಶಶಿಕುಮಾರ್‌ ನಂತರದಲ್ಲಿ ನಾಯಕ ನಟನಾಗಿ ಕನ್ನಡ ಚಿತ್ರರಸಿಕರನ್ನು ರಂಜಿಸಿದವು. ಅವರಂತೆ ಆಗಲು ನಟ ಜಗ್ಗೇಶ್‌ ಅವರು ರಾಯರಲ್ಲಿ ಪ್ರಾರ್ಥಿಸಿದ್ದರಂತೆ. ಈ ವಿಷಯವನ್ನು ಸ್ವತಃ ಜಗ್ಗೇಶ್‌ ಅವರೇ ಬಹಿರಂಗಪಡಿಸಿದ್ದಾರೆ.  

ಶಶಿಕುಮಾರ್‌ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ಜಗ್ಗೇಶ್‌,  ಶಶಿಕುಮಾರ್‌ ಅವರೊಂದಿಗಿನ ತಮ್ಮ ಸ್ನೇಹ ಮತ್ತು ಅವರಂತೆ ಸಂಭಾವನೆ ಪಡೆಯಬೇಕು, ಡ್ಯಾನ್ಸ್‌ ಮಾಡಬೇಕು ಎಂಬ ಅಭಿಲಾಷೆ ಇದ್ದದ್ದುನ್ನು ಹೇಳಿಕೊಂಡಿದ್ದಾರೆ. 

‘ನನ್ನ ಇವನ (ಶಶಿಕುಮಾರ್‌) ಬೇಟಿಯಾದದ್ದು 1988ರಲ್ಲಿ. ನಂತರ ನಾವಿಬ್ಬರು ಪ್ರತಿ ಶೂಟಿಂಗ್‌ನಲ್ಲಿ ರೂಮ್‌ ಮೇಟ್ಸ್‌ ಆಗಿದ್ದೆವು. ನಾನು ಇವನಂತೆ ಹೆಚ್ಚು ಸಂಭಾವನೆ ಪಡೆಯುವ ನಟನಾಗಿ, ಇವನಂತೆ ಡಾನ್ಸ್‌ ಮಾಡಬೇಕೆಂದು ರಾಯರಲ್ಲಿ ಪ್ರಾರ್ಥಿಸುತ್ತಿದ್ದೆ,’ ಎಂದು ಅವರು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. 

‘ನಮ್ಮ ಕಾಲದ ಚಂದದ ಹೀರೋ ಇವನಾಗಿದ್ದ. ವಯಸ್ಸಲ್ಲಿ ನನಗಿಂತ ಕಿರಿಯ. ಹುಟ್ಟುಹಬ್ಬದ ಶುಭಾಷಯಗಳು ಮಿತ್ರ,’ ಎಂದು ಜಗ್ಗೇಶ್‌ ಶುಭ ಹಾರೈಸಿದ್ದಾರೆ.

ಕನ್ನಡ ಚಿತ್ರರಂಗದವರ ಪೈಕಿ ಟ್ವಿಟರ್‌ನಲ್ಲಿ ಅತಿ ಹೆಚ್ಚು ಸಕ್ರಿಯವಾಗಿರುವ ನಟ ಜಗ್ಗೇಶ್‌. ಅಲ್ಲದೆ, ಅವರು ರಾಯರ ಭಕ್ತರೂ ಕೂಡ. ರಾಯರ ಫೋಟೊಗಳನ್ನು ತಮ್ಮ ಟ್ವಿಟರ್‌ ಖಾತೆ ಮೂಲಕ ಹಂಚಿಕೊಳ್ಳುವುದು ಜಗ್ಗೇಶ್‌ ಅವರ ರೂಢಿ ಕೂಡ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು