ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ ಕಣಿವೆಯಲ್ಲಿ ‘ಪತ್ರ’ಗಳಿಗೆ ಮರುಜೀವ

Last Updated 17 ಆಗಸ್ಟ್ 2019, 20:05 IST
ಅಕ್ಷರ ಗಾತ್ರ

ಶ್ರೀನಗರ :ಎರಡು ವಾರಗಳಿಂದ ದೂರವಾಣಿ, ಇಂಟರ್ನೆಟ್ ಸ್ಥಗಿತಗೊಂಡು ಸಂಪರ್ಕವೇ ಇಲ್ಲದಂತಾಗಿರುವ ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಪತ್ರಗಳು ಮರುಹುಟ್ಟು ಪಡೆದಿವೆ.

ಆದರೆ ಅಂಚೆ ಕಚೇರಿ ಮೂಲಕ ಈ ಸಂವಹನ ನಡೆಯುತ್ತಿಲ್ಲ. ವಿಮಾನಗಳ ಮೂಲಕ ಹೊರಗಿನ ನಗರಗಳಿಗೆ ತೆರಳುವ ಪ್ರಯಾಣಿಕರಿಗೆ ಪತ್ರಗಳನ್ನು ನೀಡಿ, ತಮ್ಮವರಿಗೆ ಸಂದೇಶ ಕಳುಹಿಸುವ ಯತ್ನವನ್ನು ಕಾಶ್ಮೀರಿಗಳು ಮಾಡುತ್ತಿದ್ದಾರೆ.

ಶ್ರೀನಗರ ವಿಮಾನ ನಿಲ್ದಾಣದ ಹೊರಗಡೆ ನಿಂತಿದ್ದ ಶಾಹುದ್ ಭಟ್ ಅವರು ದೆಹಲಿಯಲ್ಲಿರುವ ತಮ್ಮ ಮಗಳಿಗೆ ಪತ್ರವನ್ನು ತಲುಪಿಸುವ ಸೂಕ್ತ ಪ್ರಯಾಣಿಕರಿಗಾಗಿ ಹುಡುಕಾಡುತ್ತಿದ್ದರು.

‘ನಾವು ಕಾಶ್ಮೀರದಲ್ಲಿ ಸುರಕ್ಷಿತವಾಗಿದ್ದು, ಆತಂಕ ಬೇಡ. ನಿನ್ನ ಯೋಗಕ್ಷೇಮ ನೋಡಿಕೋ. ಹಣ ಕಳಿಸಲು ಯತ್ನಿಸಿದರೂ ನನಗೆ ಸಾಧ್ಯವಾಗುತ್ತಿಲ್ಲ. ಸದ್ಯವೇ ಬ್ಯಾಂಕಿಂಗ್ ಹಾಗೂ ಇಂಟರ್ನೆಟ್ ಸೇವೆ ಪುನರಾರಂಭವಾಗುವ ವಿಶ್ವಾಸವಿದೆ’ ಎಂದು ಪತ್ರದಲ್ಲಿ ಬರೆಯಲಾಗಿದೆ.

‘ದಯವಿಟ್ಟು ಟಾಟಾ ಸ್ಕೈ ರೀಚಾರ್ಜ್ ಮಾಡಿಸು. ನನಗೆ ಇಲ್ಲಿ ರೀಚಾರ್ಜ್ ಮಾಡಿಸಲು ಆಗುತ್ತಿಲ್ಲ. ಲ್ಯಾಂಡ್‌ಲೈನ್ ಪುನರಾಂಭವಾಗುವ ಸಾಧ್ಯತೆಯಿದ್ದು, ನಿನ್ನ ಚಿಕ್ಕಪ್ಪನ ದೂರವಾಣಿ ಸಂಖ್ಯೆಗೆ ಕರೆಮಾಡು’ ಎಂದು ಮತ್ತೊಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.

ಮುಂಬೈನಲ್ಲಿರುವ ಮಗನಿಗೆ ಪತ್ರವನ್ನು ವಾಟ್ಸ್‌ಆ್ಯಪ್ ಮಾಡುವಂತೆ ವ್ಯಕ್ತಿಯೊಬ್ಬರು ವಿಮಾನ ಪ್ರಯಾಣಿಕರಿಗೆ ಮನವಿ ಮಾಡುತ್ತಿದ್ದ ದೃಶ್ಯವೂ ಕಂಡುಬಂದಿತು. ನಾವು ಶಿಲಾಯುಗಕ್ಕೆ ಮರಳಿದಂತೆ ಭಾಸವಾಗುತ್ತಿದೆ ಎಂದು ಅವರು ಅಸಮಾಧಾನ ಹೊರಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT