ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಪಿಸ್ಟ್‌ಗಳನ್ನು ಜನರ ಮುಂದೆ ತಂದು ಥಳಿಸಿ ಕೊಲ್ಲಬೇಕು: ಸಂಸದೆ ಜಯಾ ಬಚ್ಚನ್ 

Last Updated 2 ಡಿಸೆಂಬರ್ 2019, 7:25 IST
ಅಕ್ಷರ ಗಾತ್ರ

ನವದೆಹಲಿ: ತೆಲಂಗಾಣದಲ್ಲಿ ಪಶು ವೈದ್ಯೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ರಾಜ್ಯಸಭೆಯಲ್ಲಿ ಸೋಮವಾರಚರ್ಚೆಯಾಗಿದೆ. ಅತ್ಯಾಚಾರವನ್ನು ಖಂಡಿಸಿದ ರಾಜ್ಯಸಭಾ ಸಂಸದೆ ಜಯಾ ಬಚ್ಚನ್, ರೇಪಿಸ್ಟ್‌ಗಳನ್ನು ಜನರ ಮುಂದೆ ತಂದು ಥಳಿಸಿ ಕೊಲ್ಲಬೇಕುಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಅತ್ಯಾಚಾರ ಪ್ರಕರಣದಆರೋಪಿಗಳ ಹೆಸರನ್ನು ಬಹಿರಂಗ ಪಡಿಸುವ ಮೂಲಕ ಅವಮಾನಿಸಬೇಕುಎಂದಿದ್ದಾರೆ ಜಯಾ.

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಈ ರೀತಿಯ ಅತ್ಯಾಚಾರ ಕೃತ್ಯಗಳನ್ನು ತಡೆಯಲು ಯಾವ ರೀತಿಯ ಕ್ರಮ ಕೈಗೊಂಡಿದೆ ಎಂಬುದರ ಬಗ್ಗೆ ಸರ್ಕಾರ ಉತ್ತರಿಸಬೇಕಿದೆ. ಪಶುವೈದ್ಯೆ ಅತ್ಯಾಚಾರಕ್ಕೊಳಗಾಗುವ ಒಂದು ದಿನಕ್ಕೆ ಮುನ್ನ ಇಂತದ್ದೇ ಘಟನೆ ಹೈದರಾಬಾದ್‌ನಲ್ಲಿ ನಡೆದಿತ್ತು ಎಂದಿದ್ದಾರೆ ಸಂಸದೆ.

ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಯಬೇಕಾದರೆ ಮಸೂದೆ ಬೇಕಿಲ್ಲ. ರಾಜಕೀಯ ಇಚ್ಛಾಶಕ್ತಿ, ಕಾರ್ಯ ನಿರ್ವಹಣೆಕೌಶಲ ಮತ್ತು ಬದಲಾದ ಮನಸ್ಥಿತಿ ಇದ್ದರೆ ಸಾಮಾಜಿಕ ಪಿಡುಗುಗಳನ್ನು ನಿವಾರಿಸಬಹುದು ಎಂದು ರಾಜ್ಯಸಭಾ ಸಭಾಪತಿ ಎಂ.ವೆಂಕಯ್ಯ ನಾಯ್ಡು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT