ಮಂಗಳವಾರ, ಫೆಬ್ರವರಿ 18, 2020
27 °C

ಜಾರ್ಖಂಡ್‌ನ ಝಾರಿಯಾ ಅತ್ಯಂತ ಮಾಲಿನ್ಯ ನಗರ: ಗ್ರೀನ್‌ಪೀಸ್‌ ಇಂಡಿಯಾ ವರದಿ

ಪಿಟಿಐ Updated:

ಅಕ್ಷರ ಗಾತ್ರ : | |

ದೆಹಲಿ : ಜಾರ್ಖಂಡ್‌ನ ಝಾರಿಯಾ ನಗರವು ಭಾರತದ ಅತಿ ಹೆಚ್ಚು ವಾಯುಮಾಲಿನ್ಯ ನಗರವಾಗಿದೆ ಎಂದು ಗ್ರೀನ್‌ಪೀಸ್‌ ಇಂಡಿಯಾ ವರದಿ ತಿಳಿಸಿದೆ. 

ಕಲ್ಲಿದ್ದಲು ನಿಕ್ಷೇಪ ಮತ್ತು ಕಾರ್ಖಾನೆಗಳು ಹೆಚ್ಚಿರುವ ಜಾರ್ಖಂಡ್‌ನ ಧನಬಾದ್‌ ಎರಡನೇ ಅತಿ ಮಾಲಿನ್ಯ ನಗರವಾಗಿದೆ. 

ವಾಯುಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ದೆಹಲಿ ಅಲ್ಪ ಪ್ರಮಾಣದಲ್ಲಿ ಸುಧಾರಣೆ ಕಂಡಿದೆ ಎಂದು ವರದಿ ತಿಳಿಸಿದೆ. ಈ ಹಿಂದೆ ದೇಶದ ಎಂಟನೇ ಮಾಲಿನ್ಯ ನಗರವಾಗಿದ್ದ ದೆಹಲಿ, ಈ ಬಾರಿ 10ನೇ ಸ್ಥಾನ ಪಡೆದಿದೆ. 

ಮಿಜೊರಾಂನ ಲುಂಗ್ಲೆ ಅತ್ಯಂತ ಕಡಿಮೆ ಮಾಲಿನ್ಯ ನಗರವಾಗಿದ್ದು, ನಂತರದ ಸ್ಥಾನವನ್ನು ಮೇಘಾಲಯದ ಡೌಕಿ ಪಡೆದಿದೆ. 

ಉತ್ತರಪ್ರದೇಶದ ನೊಯಿಡಾ, ಗಾಜಿಯಾಬಾದ್‌, ಬರೇಲಿ, ಅಲಹಾಬಾದ್‌, ಮೊರಾದಾಬಾದ್‌ ಮತ್ತು ಫಿರೊಜಾಬಾದ್‌ ಮೊದಲ ಹತ್ತು ಮಾಲಿನ್ಯಗೊಂಡಿರುವ ನಗರವಾಗಿದೆ. 

ದೇಶದ 287 ನಗರಗಳ ಪಿಎಂ 10 (ಪರ್ಟಿಕ್ಯುಲೇಟ್ ಮ್ಯಾಟರ್‌) ದತ್ತಾಂಶ ವಿಶ್ಲೇಷಣೆಯ ಆಧಾರದ ಮೇಲೆ ವರದಿ ಸಿದ್ಧಪಡಿಸಲಾಗಿದೆ. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು