ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

47ನೇ ಸಿಜೆಐ ಆಗಿ ಶರದ್‌ ಅರವಿಂದ್‌ ಬೊಬಡೆ ಪ್ರಮಾಣ ವಚನ ಸ್ವೀಕಾರ

Last Updated 18 ನವೆಂಬರ್ 2019, 4:45 IST
ಅಕ್ಷರ ಗಾತ್ರ

ನವದೆಹಲಿ: ಸುಪ್ರೀಂ ಕೋರ್ಟ್‌ನ 47ನೇ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಶರದ್‌ ಅರವಿಂದ್‌ ಬೊಬಡೆ (63) ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಸೇವಾ ಹಿರಿತನ ಆಧರಿಸಿ ನಿಯೋಜನೆಗೊಂಡಿರುವ ಬೊಬಡೆ ಅವರ ಅಧಿಕಾರಾವಧಿ 17 ತಿಂಗಳಾಗಿದ್ದು, 2021ರ ಏಪ್ರಿಲ್‌ 23ಕ್ಕೆ ನಿವೃತ್ತರಾಗಲಿದ್ದಾರೆ. ಭಾನುವಾರವಷ್ಟೇ ನಿವೃತ್ತಿಯಾದ ನಿಕಟಪೂರ್ವ ಸಿಜೆಐ ರಂಜನ್‌ ಗೊಗೊಯಿ ಅವರು ಬೊಬಡೆ ಹೆಸರನ್ನು ಶಿಫಾರಸು ಮಾಡಿದ್ದರು.

ಐತಿಹಾಸಿಕ ತೀರ್ಪು ಎಂದು ಪರಿಗಣಿಸಲ್ಪಟ್ಟಿರುವ ಅಯೋಧ್ಯೆ ತೀರ್ಪು ನೀಡಿದ ಐವರು ನ್ಯಾಯಾಧೀಶರ ನ್ಯಾಯಪೀಠದಲ್ಲಿ ಬೊಬಡೆ ಕೂಡಾ ಒಬ್ಬರಾಗಿದ್ದರು.

ಎಸ್.ಎ. ಬೊಬಡೆ ಅವರು ಮಹಾರಾಷ್ಟ್ರ ಮೂಲದವರು. ಮದ್ರಾಸ್‌ ಹೈಕೋರ್ಟ್‌, ಮಧ್ಯಪ್ರದೇಶ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿಯಾಗಿ ಅವರು ಕರ್ತವ್ಯ ನಿರ್ವಹಿಸಿದ್ದಾರೆ. 2013ರಲ್ಲಿ ಅವರನ್ನು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT