ಗುರುವಾರ , ನವೆಂಬರ್ 21, 2019
27 °C

ನ.8ಕ್ಕೆ ಕರ್ತಾರಪುರ ಕಾರಿಡಾರ್‌ ಉದ್ಘಾಟಿಸಲಿರುವ ಪ‍್ರಧಾನಿ ಮೋದಿ

Published:
Updated:

ನವದೆಹಲಿ: ಕರ್ತಾರಪುರ ಕಾರಿಡಾರ್‌ ಅನ್ನು ನವೆಂಬರ್‌ 8ರಂದು ಪ‍್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.

'ಆ ದಿನ ಇತಿಹಾಸ ಸೃಷ್ಟಿಯಾಗಲಿದೆ. 72 ವರ್ಷಗಳ ಕಾಲ ಕಾಂಗ್ರೆಸ್‌ನಿಂದ ಮಾಡಲು ಸಾಧ್ಯವಾಗದಿದ್ದನ್ನು ಪ್ರಧಾನಿ ನರೇಂದ್ರ ಮೋದಿ ಈಗ ಮಾಡಿ ತೋರಿಸಿದ್ದಾರೆ’ ಎಂದು ಕೇಂದ್ರ ಸಚಿವೆ ಹರ್‌ ಸಿಮ್ರಾತ್‌ ಕೌರ್‌ ಬಾದಲ್‌ ಟ್ವೀಟ್‌ ಮಾಡಿದ್ದಾರೆ.

ಪಂಜಾಬ್‌ನ ಗುರುದಾಸಪುರ ಡೇರಾ ಬಾಬಾ ನಾನಕ್‌ನಿಂದ ಪಾಕಿಸ್ತಾನದಲ್ಲಿರುವ ಸಿಖ್ಖರ ಪುಣ್ಯಕ್ಷೇತ್ರ ಕರ್ತಾರಪುರ ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ ಈ ಕಾರಿಡಾರ್‌ ಸಂಪರ್ಕ ಕಲ್ಪಿಸಲಿದೆ.

ಪ್ರತಿಕ್ರಿಯಿಸಿ (+)