ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ತೀಕ: ಸರಯೂ ನದಿಯಲ್ಲಿ ಭಕ್ತರಿಂದ ಪವಿತ್ರ ಸ್ನಾನ

ಅಯೋಧ್ಯೆ: ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಭಾರಿ ಬಿಗಿಭದ್ರತೆ
Last Updated 12 ನವೆಂಬರ್ 2019, 22:06 IST
ಅಕ್ಷರ ಗಾತ್ರ

ಅಯೋಧ್ಯೆ:ಕಾರ್ತೀಕ ಪೂರ್ಣಿಮೆ ನಿಮಿತ್ತ ಮಂಗಳವಾರ ಅಯೋಧ್ಯೆಯ ಸರಯೂ ನದಿಯಲ್ಲಿ ಸಾವಿರಾರು ಭಕ್ತರು ಭಾರಿ ಬಿಗಿಭದ್ರತೆಯ ನಡುವೆ ಪವಿತ್ರ ಸ್ನಾನ ಮಾಡಿದರು.

ರಾಮಜನ್ಮಭೂಮಿ ಮತ್ತು ಬಾಬರಿ ಮಸೀದಿ ವಿವಾದ ಕುರಿತು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ ನೀಡಿದ ತೀರ್ಪಿನ ನಂತರ ಅಯೋಧ್ಯೆಯಲ್ಲಿ ನಡೆದ ಮೊದಲ ಧಾರ್ಮಿಕ ಕಾರ್ಯಕ್ರಮ ಇದಾಗಿದೆ. ಮಂಗಳವಾರ ಬೆಳಿಗ್ಗೆ 5.34 ನಿಮಿಷಕ್ಕೆ ಶುರುವಾದ ಪವಿತ್ರ ಸ್ನಾನದ ಸಮಯ ಸಂಜೆ 6.42ಕ್ಕೆ ಕೊನೆಗೊಂಡಿತು.

ದಾರಿಯುದ್ದಕ್ಕೂ ‘ಸೀತಾ ರಾಮ್’ ಮಂತ್ರ ಪಠಿಸುತ್ತಾ ನದಿಯತ್ತ ಬಂದ ಜನರು ಪವಿತ್ರ ಸ್ನಾನ ಕೈಗೊಂಡರು. ಭಕ್ತರಲ್ಲಿ ಬಹುತೇಕರು ನದಿ ಪಕ್ಕದಲ್ಲೇ ಹಿಂದಿನ ದಿನವೇ ಮೊಕ್ಕಾಂ ಹೂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT