‘ಅಣ್ಣಾ ಸಮಾಧಿ’ ಸಮೀಪ ಕರುಣಾನಿಧಿ ಅಂತ್ಯ ಕ್ರಿಯೆಗೆ ಒಪ್ಪದ ತಮಿಳುನಾಡು ಸರ್ಕಾರ

7

‘ಅಣ್ಣಾ ಸಮಾಧಿ’ ಸಮೀಪ ಕರುಣಾನಿಧಿ ಅಂತ್ಯ ಕ್ರಿಯೆಗೆ ಒಪ್ಪದ ತಮಿಳುನಾಡು ಸರ್ಕಾರ

Published:
Updated:

 ಚೆನ್ನೈ: ಇಲ್ಲಿನ ಅಣ್ಣಾ ಸ್ಮಾರಕದ ಸಮೀಪ ಕರುಣಾನಿಧಿ ಅವರ ’ಸಮಾಧಿ’ಗಾಗಿ ಡಿಎಂಕೆ ಮಾಡಿದ ಮನವಿಯನ್ನು ಇ.ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಸರ್ಕಾರ ತಿರಸ್ಕರಿಸಿದೆ.

ಮರೀನಾ ಬೀಚ್‌ನಲ್ಲಿರುವ ಅಣ್ಣಾ ಸ್ಮಾರಕ ಸ್ಥಳ ನೀಡಲು ಕಾನೂನು ತೊಡಕುಗಳು ಇರುವುದಾಗಿ ಹೇಳಿರುವ ಸರ್ಕಾರ, ಕರುಣಾನಿಧಿ ಅವರ ಅಂತ್ಯ ಸಂಸ್ಕಾರಕ್ಕಾಗಿ ಅಡ್ಯಾರ್‌ನ ಗಾಂಧಿ ಮಂಟಪದ ಸಮೀಪ 2 ಎಕರೆ ಭೂಮಿ ನೀಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ. 

ಕರುಣಾನಿಧಿ ಅವರ ಸಮಾಧಿಗೆ ಮರೀನಾ ಬೀಚ್‌ ಸಮೀಪ ಸ್ಥಳಾವಕಾಶ ನೀಡಲು ಹಿಂದೇಟು ಹಾಕಿರುವ ತಮಿಳುನಾಡು ಸರ್ಕಾರದ ವಿರುದ್ಧ ಡಿಎಂಕೆ ನಾಯಕರು ಮದ್ರಾಸ್‌ ಹೈ ಕೋರ್ಟ್‌ ಮೊರೆ ಹೋಗಿದ್ದು, ರಾತ್ರಿ 10:30ಕ್ಕೆ ಹೈ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹುಲುವಾದಿ ಜಿ.ರಮೇಶ್‌ ಪ್ರಕರಣದ ವಿಚಾರಣೆ ನಡೆಸಲು ಒಪ್ಪಿದ್ದಾರೆ.  

ಅಣ್ಣಾ ಸ್ಮಾರಕದ ಸಮೀಪವೇ ತಂದೆಯ ಸಮಾಧಿ ನಿರ್ಮಿಸಲು ಮತ್ತೊಮ್ಮೆ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ಕರುಣಾನಿಧಿ ಅವರ ಪುತ್ರ, ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟ್ಯಾಲಿನ್‌ ಪ್ರತಿಕ್ರಿಯಿಸಿದ್ದಾರೆ. 

(ಅಣ್ಣಾ ಸ್ಮಾರಕ)

1969ರಲ್ಲಿ ನಿಧನರಾದ ತಮಿಳುನಾಡು ಮಾಜಿ ಮುಖ್ಯಮಂತ್ರಿ, ಡಿಎಂಕೆ ಸಂಸ್ಥಾಪಕ ಸಿ.ಎನ್‌.ಅಣ್ಣಾದುರೈ ಅವರ ಅಂತ್ಯ ಕ್ರಿಯೆಯನ್ನು ಮರೀನಾ ಬೀಚ್‌ನ ಸಮೀಪ ನಡೆಸಲಾಗಿತ್ತು. ಆ ಸ್ಮಾರಕ ಸ್ಥಳವನ್ನು ಸ್ಥಳೀಯವಾಗಿ ’ಅಣ್ಣಾ ಸಮಾಧಿ’ ಎಂದೇ ಕರೆಯುತ್ತಾರೆ. ಇದೇ ಸಮಾಧಿ ಜಾಗದಿಂದ ಕೇವಲ 50 ಮೀಟರ್‌ ದೂರದಲ್ಲಿ ಎಐಎಕೆಎಂಕೆ ಮುಖ್ಯಸ್ಥೆಯಾಗಿದ್ದ ಜೆ.ಜಯಲಲಿತಾ ಅವರ ಸಮಾಧಿ ಇದೆ. 

"ಇಂಥ ಸಂದರ್ಭದಲ್ಲಿ ತಮಿಳುನಾಡು ಸರ್ಕಾರ ರಾಜಕೀಯ ಮಾಡಬಾರದು. ’ಕಲೈಂಗರ್‌’ಗೆ ದೊರೆಯಬೇಕಾದ ಗೌರವವನ್ನು ನೀಡಬೇಕು" ಎಂದು ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಹೇಳಿದ್ದಾರೆ.

ಇದನ್ನೂ ಓದಿರಿ

'ಪರಾಶಕ್ತಿ' ಸಿನಿಮಾದ ಚಿತ್ರಕಥೆ ಮೂಲಕ ಮೋಡಿ ಮಾಡಿದ್ದ ಕರುಣಾನಿಧಿ

ಕಣ್ಮರೆಯಾದರು ಕರುಣಾನಿಧಿ, ಜಯಲಲಿತಾ: ಬದಲಾಗಲಿದೆಯೇ ದ್ರಾವಿಡ ರಾಜಕಾರಣಮಾಡಿದ್ದ ಕರುಣಾನಿಧಿ

ಕಲೈಂಗರ್ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು

ಕೋಲಾರದ ಚಿನ್ನದ ಗಣಿಗೆ ಇಳಿದಿದ್ದ ಕರುಣಾನಿಧಿ

ಕರುಣಾನಿಧಿ ಬದುಕಿನ ಹಾದಿ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !