ಕೆಸಿಆರ್ ಪ್ರಮಾಣ ವಚನ ಸ್ವೀಕರಿಸಿದ್ದು ‘ಬಾಹುಬಲಿ ಮುಹೂರ್ತ’ದಲ್ಲಿ

7
ಅದೃಷ್ಟ ಒಲಿದು ಬರುವ ನಿರೀಕ್ಷೆಯಲ್ಲಿ ತೆಲಂಗಾಣ ಮುಖ್ಯಮಂತ್ರಿ

ಕೆಸಿಆರ್ ಪ್ರಮಾಣ ವಚನ ಸ್ವೀಕರಿಸಿದ್ದು ‘ಬಾಹುಬಲಿ ಮುಹೂರ್ತ’ದಲ್ಲಿ

Published:
Updated:

ಹೈದರಾಬಾದ್: ಸ್ಕಂದ ಷಷ್ಠಿ ಎಂದೇ ಪ್ರಖ್ಯಾತವಾಗಿರುವ ಮಾರ್ಗಶಿರ ಮಾಸ, ಶುಕ್ಲ ಪಕ್ಷದ ಷಷ್ಠಿ, ಗುರುವಾರ ಮಧ್ಯಾಹ್ನ 1.24ಕ್ಕೆ ಸಲ್ಲುವ ಶುಭ ‘ಬಾಹುಬಲಿ ಮುಹೂರ್ತ’ದಲ್ಲಿ ತೆಲಂಗಾಣದ ಮುಖ್ಯಮಂತ್ರಿಯಾಗಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಅಧ್ಯಕ್ಷ ಕೆ.ಚಂದ್ರಶೇಖರ್‌ ರಾವ್ (ಕೆಸಿಆರ್) ಪ್ರಮಾಣ ವಚನ ಸ್ವೀಕರಿಸಿದರು.

ಧಾರ್ಮಿಕ ಆಚರಣೆಗಳನ್ನು ಚಾಚೂತಪ್ಪದೆ ಪಾಲಿಸುವ ಕೆಸಿಆರ್‌ ಪ್ರಮಾಣ ವಚನ ಸ್ವೀಕರಿಸಿದ ಮುಹೂರ್ತವೂ ಇದೀಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ತೆಲಂಗಾಣದ ಪ್ರಸಿದ್ಧ ಯಾತ್ರಾಸ್ಥಳವಾದ ಯಾದಗಿರಿ ಲಕ್ಷ್ಮೀನರಸಿಂಹಸ್ವಾಮಿ ದೇಗುಲದ ವೇದ ವಿದ್ವಾಂಸರು ಈ ಮುಹೂರ್ತ ನಿಶ್ಚಯಿಸಿದ್ದರು ಎಂದು ‘ಹಿಂದೂಸ್ತಾನ್ ಟೈಮ್ಸ್‌’ ವರದಿ ಮಾಡಿದೆ.

ಕೆಸಿಆರ್‌ ಪ್ರಮಾಣ ವಚನ ಸ್ವೀಕರಿಸಿದ ಸಮಯವನ್ನು ಯಾದಗಿರಿ ಕ್ಷೇತ್ರದ ಪ್ರಧಾನ ಅರ್ಚಕ ಲಕ್ಷ್ಮೀ ನರಸಿಂಹಾಚಾರ್ಯ ‘ಬಾಹುಬಲಿ ಮುಹೂರ್ತ’ ಎಂದು ಬಣ್ಣಿಸಿದ್ದಾರೆ.

‘ಕೆಸಿಆರ್‌ ಪ್ರಮಾಣ ವಚನಕ್ಕೆ ಗುರುವಾರ ಮಧ್ಯಾಹ್ನ 1.24ರ ಮಹೂರ್ತ ನಿಗದಿಪಡಿಸಲಾಗಿತ್ತು. 1.24ಕ್ಕೆ ಶುರುವಾಗುವ ಅಮೃತ ಘಳಿಗೆಯು ಒಂದೂವರೆ ಗಂಟೆ ಜಾಗೃತವಾಗಿರುತ್ತದೆ. ಈ ಕಾಲದಲ್ಲಿ ಗ್ರಹಗಳು ಉಚ್ಚ ಸ್ಥಾನದಲ್ಲಿರುತ್ತವೆ. ಈ ಅವಧಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ ರಾಜಯೋಗ ಒಲಿಯುತ್ತದೆ. ಹೀಗಾಗಿಯೇ ಕೆಸಿಆರ್‌ಗೆ ‘ಬಾಹುಬಲಿ ಮುಹೂರ್ತ’ದಲ್ಲಿ ಪ್ರಮಾಣ ವಚನ ಸ್ವೀಕರಿಸಲು ಸೂಚಿಸಿದೆವು’ ಎಂದು ನರಸಿಂಹಾಚಾರ್ಯ ‘ಹಿಂದೂಸ್ತಾನ್‌ ಟೈಮ್ಸ್‌’ಗೆ ಪ್ರತಿಕ್ರಿಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !