ಶುಕ್ರವಾರ, ಫೆಬ್ರವರಿ 21, 2020
31 °C

ವಿದ್ಯಾರ್ಥಿಗಳಿಗೆ ಬಸ್‌ ಪ್ರಯಾಣ ಉಚಿತ: ಕೇಜ್ರಿವಾಲ್‌ ಭರವಸೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ವಿಧಾನಸಭೆ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷವನ್ನು(ಎಎಪಿ) ಜನತೆ ಪುನರ್‌ ಆಯ್ಕೆ ಮಾಡಿದರೆ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪ್ರಯಾಣ, ಮಹಿಳಾ ಸುರಕ್ಷತೆಗೆ ಮೊಹಲ್ಲಾ ಮಾರ್ಷಲ್‌ಗಳ ನೇಮಕದ ಭರವಸೆಯನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ನೀಡಿದ್ದಾರೆ.

ಭಾನುವಾರ ಪಕ್ಷದ ಕಚೇರಿಯಲ್ಲಿ ‘ಕೇಜ್ರಿವಾಲ್‌ ಅವರ 10 ಭರವಸೆಗಳು’ ಎಂಬ ಕಾರ್ಡ್‌ ಬಿಡುಗಡೆಗೊಳಿಸಿದ ಕೇಜ್ರಿವಾಲ್‌,
‘ಇದು ಪ್ರಣಾಳಿಕೆಯಲ್ಲ. ಇದು ದೆಹಲಿ ಜನತೆಗೆ ನನ್ನ ಭರವಸೆ. ಹತ್ತು ದಿನದೊಳಗಾಗಿ ನಾವು ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಲಿದ್ದೇವೆ’ ಎಂದರು.

‘ಈಗಾಗಲೇ ಚಾಲ್ತಿಯಲ್ಲಿರುವ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌, ಉಚಿತ ಆರೋಗ್ಯ ಸೌಲಭ್ಯ ಮುಂದುವರಿಸುವುದಾಗಿ’ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು