ದೆಹಲಿಯಲ್ಲಿ ಎಎಪಿ ಗೆಲುವಿನ ಸಾಧ್ಯತೆ ಕಡಿಮೆ: ಕೇಜ್ರಿವಾಲ್ ಸುಳಿವು

ಬುಧವಾರ, ಜೂನ್ 19, 2019
32 °C

ದೆಹಲಿಯಲ್ಲಿ ಎಎಪಿ ಗೆಲುವಿನ ಸಾಧ್ಯತೆ ಕಡಿಮೆ: ಕೇಜ್ರಿವಾಲ್ ಸುಳಿವು

Published:
Updated:

ನವದೆಹಲಿ: ‘ದೆಹಲಿಯ ಮುಸ್ಲಿಮರು ಸಮಗ್ರವಾಗಿ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ’ ಎಂದು ದೆಹಲಿ ಮುಖ್ಯಮಂತ್ರಿ, ಎಎಪಿ ಮುಖಂಡ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ತನ್ಮೂಲಕ ದೆಹಲಿಯಲ್ಲಿ ತಮ್ಮ ಪಕ್ಷ ದೊಡ್ಡ ಸಾಧನೆಯನ್ನೇನೂ ಮಾಡಿಲ್ಲ ಎಂಬ ಸೂಚನೆಯನ್ನು ನೀಡಿದ್ದಾರೆ.

ಪಂಜಾಬ್‌ನಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯ ಪರ ಪ್ರಚಾರದಲ್ಲಿ ತೊಡಗಿದ್ದ ಅವರು, ಮಾಧ್ಯಮಪ್ರತಿನಿಧಿ ಜೊತೆ ಮಾತನಾಡುತ್ತ, ‘ಮತದಾನಕ್ಕೂ 48 ಗಂಟೆ ಮುಂಚಿನವರೆಗೂ ದೆಹಲಿಯ ಏಳು ಕ್ಷೇತ್ರಗಳಲ್ಲೂ ಎಎಪಿ ಗೆಲ್ಲಬಹುದು ಎಂಬ ಸ್ಥಿತಿ ಇತ್ತು. ಆದರೆ ಕೊನೆಯ ಕ್ಷಣದಲ್ಲಿ ಚಿತ್ರಣ ಬದಲಾಗಿ ಮುಸ್ಲಿಮರೆಲ್ಲರೂ ಕಾಂಗ್ರೆಸ್‌ನತ್ತ ವಾಲಿದರು. ಈ ಬದಲಾವಣೆಗೆ ಕಾರಣವೇನು ಎಂದು ತಿಳಿಯುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ’ ಎಂದರು.

ಕೇಜ್ರಿವಾಲ್‌ ಅವರ ಈ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ ನಾಯಕಿ ಶೀಲಾ ದೀಕ್ಷಿತ್‌, ‘ಅವರು (ಕೇಜ್ರಿವಾಲ್‌) ಏನು ಹೇಳಲು ಪ್ರಯತ್ನಿಸುತ್ತಿದ್ದಾರೆ ಎಂಬದೇ ಅರ್ಥವಾಗುತ್ತಿಲ್ಲ. ತಾನು ಬಯಸಿದ ಪಕ್ಷಕ್ಕೆ ಅಥವಾ ವ್ಯಕ್ತಿಗೆ ಮತಹಾಕುವ ಅಧಿಕಾರ ಪ್ರತಿಯೊಬ್ಬರಿಗೂ ಇದೆ. ಕೇಜ್ರಿವಾಲ್‌ ಅವರ ಆಡಳಿತ ಜನರಿಗೆ ಇಷ್ಟವಾಗಿಲ್ಲಮತ್ತು ಅವರ ಆಡಳಿತ ಶೈಲಿ ಏನೆಂಬುದೇ ಜನರಿಗೆ ಅರ್ಥವಾಗಿಲ್ಲ’ ಎಂದಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 4

  Happy
 • 6

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !