ಕೇರಳ: 82442 ಮಂದಿ ರಕ್ಷಣೆ,  ನಿರಾಶ್ರಿತರ ಶಿಬಿರದಲ್ಲಿದ್ದಾರೆ 3.14 ಲಕ್ಷ ಜನರು

7

ಕೇರಳ: 82442 ಮಂದಿ ರಕ್ಷಣೆ,  ನಿರಾಶ್ರಿತರ ಶಿಬಿರದಲ್ಲಿದ್ದಾರೆ 3.14 ಲಕ್ಷ ಜನರು

Published:
Updated:

ತಿರುವನಂತಪುರಂ: ಕೇರಳದಲ್ಲಿನ ಜಲ ಪ್ರಳಯದಲ್ಲಿ ಇಲ್ಲಿಯವರೆಗೆ 324 ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಮೇ.29ರಿಂದ ಇಲ್ಲಿಯವರೆಗೆ ಮುಂಗಾರು ಮಳೆಯಲ್ಲಿ ಜೀವ ಕಳೆದುಕೊಂಡವರ ಸಂಖ್ಯೆ ಇದು. ಈ ತಿಂಗಳು 164 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಶುಕ್ರವಾರ ರಾಜ್ಯದ ವಿವಿಧ ಭಾಗಗಳಲ್ಲಿ ಒಟ್ಟು 82,442 ಮಂದಿಯನ್ನು ರಕ್ಷಿಸಲಾಗಿದೆ. ಮಳೆಯಿಂದಾಗಿ ಅತೀವ ಸಂಕಷ್ಟದಲ್ಲಿರುವ ಚೆಂಗನ್ನೂರ್, ಚಾಲಕ್ಕುಡಿ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಗಳು ನಡೆಯುತ್ತಿವೆ.
ಶುಕ್ರವಾರ ಸಂಜೆ ಸಿಕ್ಕಿದ ಮಾಹಿತಿ ಪ್ರಕಾರ, 7085 ಕುಟುಂಬಗಳ 3,14, 391  ಮಂದಿ 2094 ನಿರಾಶ್ರಿತ ಶಿಬಿರಗಳಲ್ಲಿದ್ದಾರೆ. ನಿರಾಶ್ರಿತರ ಶಿಬಿರದಲ್ಲಿ ಊಟ ಮತ್ತು ನೀರಿನ ವ್ಯವಸ್ಥೆ ಮಾಡಲಾಗಿದೆ.

ಚಾಲಕ್ಕುಡಿ ಮತ್ತು ಚೆಂಗನ್ನೂರಿನಲ್ಲಿ ಹದಗೆಟ್ಟ ಪರಿಸ್ಥಿತಿ
ಇಲ್ಲಿನ ಪ್ರದೇಶಗಳಲ್ಲಿ ಹರಿಯುವ ನೀರಿನ ರಭಸ ಹೆಚ್ಚಿದ್ದರಿಂದ ರಕ್ಷಣಾ ಕಾರ್ಯಗಳಿಗೆ ಅಡಚಣೆಯುಂಟಾಗುತ್ತಿದೆ ಎಂದು ಪಿಣರಾಯಿ ಹೇಳಿದ್ದಾರೆ. ಈ ಎರಡು ಪ್ರದೇಶಗಳಲ್ಲಿ  ಶನಿವಾರ ಹೆಚ್ಚಿನ ಸಂಖ್ಯೆಯಲ್ಲಿ ಹೆಲಿಕಾಪ್ಟರ್ ಗಳನ್ನು ನಿಯೋಜಿಸಲಾಗುವುದು.

ಕೇರಳ ನೆರೆ ನಿರಾಶ್ರಿತರಿಗೆ ಸಹಾಯ ಮಾಡಿ
ನೆರೆ ನಿರಾಶ್ರಿತರಿಗೆ ತುರ್ತಾಗಿ ಕೆಲವು ವಸ್ತುಗಳ ಅಗತ್ಯವಿದೆ. ಅಗತ್ಯ ವಸ್ತುಗಳ ಪಟ್ಟಿ ಇಲ್ಲಿದೆ.

ಅಕ್ಕಿ
ಸ್ಯಾನಿಟರಿ ನ್ಯಾಪ್‍ಕಿನ್  (ನಿರಾಶ್ರಿತ ಶಿಬಿರದಲ್ಲಿರುವವರಿಗೆ ತುರ್ತಾಗಿ ಬೇಕಾಗಿದೆ)
ಮಕ್ಕಳ ಉಡುಪುಗಳು
ಕ್ಯಾಂಡಲ್ ಮತ್ತು ಬೆಂಕಿ ಪೊಟ್ಟಣ
ಬೆಡ್ ಶೀಟ್ 
ಸ್ವೆಟರ್
ಸೊಳ್ಳೆ ಬತ್ತಿ 
ಗಂಡಸರ ಮತ್ತು ಹೆಂಗಸರ ಒಳ ಉಡುಪುಗಳು 
ಗಂಡಸರ ಮತ್ತು ಹೆಂಗಸರ ಬಟ್ಟೆಗಳು
ರಸ್ಕ್, ಬಿಸ್ಕೆಟ್  (ಬ್ರೆಡ್ ಬೇಡ)
ಚಪ್ಪಲಿ
ಸಕ್ಕರೆ 
ಬ್ಯಾಟರಿ
ಬೆಚ್ಚನೆಯ ಹೊದಿಕೆ
ಡೆಟಾಲ್

ಬೆಂಗಳೂರಿನಿಂದ ಅಗತ್ಯ ವಸ್ತುಗಳನ್ನು ಕೇರಳಕ್ಕೆ ಕೊಂಡೊಯ್ಯುವ ಕಾರ್ಯವನ್ನು ಕೆಲವು ಫೇಸ್‍ಬುಕ್ ಗ್ರೂಪ್‍ಗಳು ಮಾಡುತ್ತಿವೆ. ನೀವೂ ಸಹಾಯ ಮಾಡಬೇಕೆಂದಿದ್ದರೆ ಈ ಕೆಳಗಿನ ಸಂಖ್ಯೆಗೆ ಸಂಪರ್ಕಿಸಿ.
ಅಮೀನ್ ಸೀಶೆಲ್ ಸಾವರಿ ಮಡಿವಾಳ :-8197885167
ಮನೋಶ್:- 99409 83036
ಕೃಷ್ಣ ಪ್ರಸಾದ್ : 9846270012

ಈ ಲಿಂಕ್ ಕ್ಲಿಕ್ ಮಾಡಿ ನೆರವಾಗಿ

ಧನ ಸಹಾಯ ಮಾಡಲಿಚ್ಛಿಸುವವರು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಹಣ ಕಳುಹಿಸಬಹುದು.


ಮಾಹಿತಿ ಇಲ್ಲಿದೆ.
 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !