ಬುಧವಾರ, ಮೇ 27, 2020
27 °C

ವೈದ್ಯರ ಚೀಟಿ ಇದ್ದರೆ ಮಾತ್ರ ಮನೆ ಬಾಗಿಲಿಗೆ ಮದ್ಯ ತಲುಪಿಸಲಿದೆ ಕೇರಳ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

kerala police

ತಿರುವನಂತಪುರಂ: ಮದ್ಯ ಲಭಿಸಿದೆ ಕೇರಳದಲ್ಲಿ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಮನೆಗೆ ಬಾಗಿಲಿಗೆ ಮದ್ಯ ತಲುಪಿಸಲ ಕೇರಳ ಸರ್ಕಾರ ತೀರ್ಮಾನಿಸಿದೆ. ವೈದ್ಯರ ಚೀಟಿ ಇದ್ದರೆ ಅಂಥಾ ವ್ಯಕ್ತಿಗಳ ಮನೆಗೆ ಮದ್ಯ ತಲುಪಿಸಲಾಗುತ್ತದೆ.

ಆದಾಗ್ಯೂ, ವಿತ್‌ಡ್ರಾವಲ್ ಸಿಂಡ್ರೋಮ್‌ನಿಂದ ಬಳಲುತ್ತಿರುವ ವ್ಯಕ್ತಿಗೆ ವೈದ್ಯರ ಸಲಹೆಯಂತೆ ಮದ್ಯ ನೀಡುವ ಕೇರಳ ಸರ್ಕಾರದ ನಿರ್ಧಾರಕ್ಕೆ ವೈದ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತ ಪಡಿಸಿರುವ ವೈದ್ಯರು ಬುಧವಾರ ಕಪ್ಪು ಪಟ್ಟಿ ಧರಿಸಿ ವಿರೋಧ ಸೂಚಿಸಿದ್ದಾರೆ. ಕೆಲವು ವೈದ್ಯರು ಸರ್ಕಾರದ ನಿರ್ಧಾರ ಖಂಡಿಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ವೈದ್ಯರ ಅನುಮತಿ ಇದ್ದರೆ ಮದ್ಯ ಸೇವಿಸಬಹುದು ಎಂಬ ಸರ್ಕಾರದ ನಿರ್ಧಾರ ಘೋಷಣೆಯಾಗುವ ಮುನ್ನವೇ ಹಲವಾರು ಮದ್ಯಪಾನಿಗಳು ವೈದ್ಯರ ಚೀಟಿ ತಂದು ಮದ್ಯದಂಗಡಿಯಿಂದ ಮದ್ಯ ಪಡೆದಿದ್ದಾರೆ. ಸಣ್ಣ ಪುಟ್ಟ ಕ್ಲಿನಿಕ್‌ಗಳಿಂದ ಪಡೆದ ವೈದ್ಯರ ಚೀಟಿಯಾಗಿತ್ತು ಅದು.

ಏತನ್ಮಧ್ಯೆ, ಕೇರಳದಲ್ಲಿ ಮದ್ಯ ವಿತರಿಸುವ ಏಕೈಕ ಸಂಸ್ಥೆಯಾದ ಕೇರಳ ರಾಜ್ಯ ಬಿವರೇಜ್ ಕಾರ್ಪೊರೇಷನ್ ಪ್ರಕಾರ ಬುಧವಾರ ಮಧ್ಯಾಹ್ನದವರೆಗೆ ಮದ್ಯ ವಿತರಣೆಗೆ ಯಾವುದೇ ಮನವಿ ಬಂದಿಲ್ಲ. ವಿತ್‌ಡ್ರಾವಲ್ ಸಿಂಡ್ರೋಮ್ ಇರುವವರು ವೈದ್ಯರ ಚೀಟಿ ತೋರಿಸಿದರೆ ಅವರ ಮನೆಗೇ ಮದ್ಯ ತಲುಪಿಸಲಾಗುವುದು. ಒಬ್ಬ ವ್ಯಕ್ತಿಗೆ ಒಂದು ವಾರದಲ್ಲಿ ಮೂರು ಲೀಟರ್ ಮದ್ಯ ಸಿಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು