ಗುರುವಾರ , ಜೂನ್ 4, 2020
27 °C

ಕರ್ನಾಟಕ-ಕೇರಳ ಗಡಿ ಬಂದ್ ಪ್ರಕರಣ: ಕೇರಳ ಹೈಕೋರ್ಟ್ ಗರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇರಳ: ಕರ್ನಾಟಕ ಹಾಗೂ ಕೇರಳ ಗಡಿ ಬಂದ್ ಮಾಡಿರುವ ಕರ್ನಾಟಕದ ಕ್ರಮ ಕುರಿತು ವಾದ ಆಲಿಸಿದ ಕೇರಳ ಹೈಕೋರ್ಟ್ ಸರ್ಕಾರಗಳ ಧೋರಣೆ ಕುರಿತು ಬೇಸರ ವ್ಯಕ್ತಪಡಿಸಿದ್ದು, ಕೇವಲ ಕೊರೊನಾ ರೋಗವನ್ನೇ ನೋಡುತ್ತಿದ್ದರೆ, ಇತರೆ ರೋಗಗಳಿಂದ ಜನರು ಮೃತಪಟ್ಟರೆ ಅದಕ್ಕೆ ಹೊಣೆಯಾರು ಎಂದು ಪ್ರಶ್ನಿಸಿದೆ. 

ಈ ಸಂಬಂಧ ಸಂಜೆ 5.30ಕ್ಕೆ ಆದೇಶ ಹೊರಡಿಸುವುದಾಗಿ ಹೈಕೋರ್ಟ್ ತಿಳಿಸಿದೆ. ಕಾಸರಗೋಡಿನಲ್ಲಿ ಹಕ್ಕಿಜ್ವರ ಹಾಗೂ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗಿವೆ. ಕರ್ನಾಟಕದಲ್ಲಿಯೂ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೇರಳ ಕರ್ನಾಟಕ ಗಡಿ ಭಾಗವನ್ನು ಬಂದ್ ಮಾಡಲಾಗಿದೆ. ಕಾಸರಗೋಡಿನಿಂದ ಬಂದ ಕೊರೊನಾ ಸೋಂಕಿತರನ್ನು ದಾಖಲಿಸಿಕೊಳ್ಳಲು ಸಾಧ್ಯವಿಲ್ಲ. ಕೊಡಗು ಹಾಗೂ ಮಂಗಳೂರಿನಲ್ಲಿ ಕೊರೊನಾ ಸೋಂಕಿತರನ್ನು ದಾಖಲು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಕರ್ನಾಟಕ ಅಡ್ವೊಕೇಟ್ ಜನರಲ್ ಕೇರಳ ಹೈಕೋರ್ಟ್‌‌ಗೆ ಅಫಿಡವಿಟ್ ಸಲ್ಲಿಸಿದೆ.

ಇಲ್ಲಿ ಕೇವಲ ಕೊರೊನಾ ಪೀಡಿತ ಪ್ರದೇಶಗಳ ನಡುವೆ ಸೋಂಕು ಹೆಚ್ಚಾಗಬಾರದು ಎಂದು ಬೇರ್ಪಡಿಸಿದ್ದೇವೆ ವಿನಃ ಬೇರಾವ ಕಾರಣಕ್ಕಾಗಿ ಅಲ್ಲ ಎಂದು ಕರ್ನಾಟಕ ತಿಳಿಸಿದೆ. ಇದನ್ನು ಪ್ರಶ್ನಿಸಿ ಕೇರಳ ಸರ್ಕಾರ ನ್ಯಾಯಾಲಯದ ಮೆಟ್ಟಿಲು ಏರಿದೆ. ಈ ಪ್ರಕರಣದ ವಿಚಾರಣೆ ನಡೆಸಿ ಎರಡೂ ಸರ್ಕಾರಗಳ ವಾದವನ್ನು ಕೇಳಿದ ಕೇರಳ ಹೈಕೋರ್ಟ್ ತೀವ್ರ ಬೇಸರ ವ್ಯಕ್ತಪಡಿಸಿದೆ. 

ಈ ಸಂಬಂಧ ವೈದ್ಯರು ಕೇವಲ ಕೊರೊನಾ ಸೋಂಕಿತರನ್ನು ಮಾತ್ರ ತಪಾಸಣೆ ಮಾಡುತ್ತೇವೆ ಎನ್ನುತ್ತಿದ್ದರೆ ಇತರೆ ರೋಗಗಳಿಂದ ಸಾವು ಸಂಭವಿಸಿದರೆ ಯಾರು ಹೊಣೆ. ಈ ಸಂಬಂಧ ಸಂಜೆ ಆದೇಶ ಹೊರಡಿಸುವುದಾಗಿ ತಿಳಿಸಿ ವಾದವನ್ನು ಸಂಜೆ 5.30ಕ್ಕೆ 
ಮುಂದೂಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು