ಕೇರಳ: ವರುಣನ ಮುನಿಸಿಗೆ 87 ಮಂದಿ ಬಲಿ

7

ಕೇರಳ: ವರುಣನ ಮುನಿಸಿಗೆ 87 ಮಂದಿ ಬಲಿ

Published:
Updated:

ತಿರುವನಂತಪುರ: ಕೇರಳದಲ್ಲಿ ನಿರಂತರವಾಗಿ ಎಡೆಬಿಡದೆ ಆರ್ಭಟಿಸುತ್ತಿರುವ ಮಳೆಯ ಅಬ್ಬರಕ್ಕೆ ಸಾವಿನ ಸಂಖ್ಯೆ 87ಕ್ಕೆ ಏರಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ. 

ರಾಜ್ಯದ 14 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, 35 ಜಲಾಶಯಗಳ ಬಾಗಿಲುಗಳನ್ನು ತೆರೆಯಲಾಗಿದೆ. ಎರ್ನಾಕುಲಂನ 23 ಸಾವಿರ ಜನ ಸೇರಿದಂತೆ ಇನ್ನು ಹಲವರನ್ನು ಸಂತ್ರಸ್ಥ ಪ್ರದೇಶಗಳಿಗೆ ಕಳುಹಿಸಲಾಗಿದೆ. 

ಪ್ರವಾಹದ ಕಾರಣದಿಂದಾಗಿ ಕೊಚ್ಚಿ ಮೆಟ್ರೊ, ದಕ್ಷಿಣ ರೈಲ್ವೆ ಸಂಪರ್ಕ ಕಡಿತಗೊಂಡಿದ್ದು,  ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. 

ಎರಡು ಮಕ್ಕಳ ಸಾವು, 8 ಮಂದಿ ಕಣ್ಮರೆ
ಊರ್ಕಾಡಾವು ಎಂಬಲ್ಲಿ ಸಂಭವಿಸಿದ ಮನೆ ಗೋಡೆ ಕುಸಿತದಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಕೂರಂಚೇರಿ ಮತ್ತು ತ್ರಿಶೂರ್‌ನಲ್ಲಿ ಉಂಟಾದ ಭೂಕಂಪದಲ್ಲಿ 8 ಮಂದಿ ಕಣ್ಮರೆಯಾಗಿದ್ದಾರೆ.  ಹೆಲಿಕಾಪ್ಟರ್ ಮೂಲಕ ಒಂದು ಮಗುವನ್ನು ರಕ್ಷಿಸಲಾಗಿದೆ

₹5 ಕೋಟಿ ಘೋಷಣೆ:
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಕೇರಳದ ಪ್ರವಾಹ ಸಂತ್ರಸ್ಥರಿಗೆ ₹5 ಕೋಟಿ ಘೋಷಿಸಿದ್ದಾರೆ. 

12 ಹೆಚ್ಚುವರಿ ಎನ್‌ಡಿಆರ್‌ಎಫ್
ರಕ್ಷಣಾ ಕಾರ್ಯಕ್ಕಾಗಿ ಇನ್ನು 12 ಹೆಚ್ಚುವರಿ ರಾಷ್ಟ್ರೀಯ ವಿಪತ್ತು ಪಡೆಯನ್ನು (ಎನ್‌ಡಿಆರ್‌ಎಫ್) ಕೇರಳಕ್ಕೆ ರವಾನಿಸಲಾಗಿದೆ. ಇದುವರೆಗೂ 926 ಮಂದಿಯನ್ನು ರಕ್ಷಿಸಿ, ಬೇರೆಡೆಗೆ ಸ್ಥಳಾಂತರಿಸಿದ್ದಾರೆ. 

ಸೇನಾ ಪಡೆ ಕಸರತ್ತು
ವಾಲಿಯಾಕಾಡು ಗ್ರಾಮದ ಮಲಮ್‌ಪುಜಾದಲ್ಲಿ 35 ಮೀಟರ್ ಉದ್ದದ ಸೇತುವೆ ನಿರ್ಮಿಸಿದ ಸೇನಾಪಡೆ, ಮಕ್ಕಳು, ಹಿರಿಯ ನಾಗರಿಕರು ಸೇರಿದಂತೆ ಒಟ್ಟು 100 ಮಂದಿಯನ್ನು ರಕ್ಷಿಸಿದ್ದಾರೆ. 
 

ಹೆಲಿಕಾಪ್ಟರ್ ಕಾರ್ಯಾಚರಣೆ 
ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್‌ಗಳು ಪ್ರವಾಹದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯದಲ್ಲಿ ನಿರತವಾಗಿದ್ದು, ತ್ರಿಶೂರ್‌, ಅಲುವಾ, ಪೆರಂಬವೂರ್‌ನ 132 ಮಂದಿಯನ್ನು ರಕ್ಷಿಸಲಾಗಿದೆ. 

ಕೇರಳದ ಸ್ಥಿತಿ ಗಂಭೀರ
ಮಳೆಯ ಬ್ಬರದಿಂದ ಕೇರಳದ ಸ್ಥಿತಿ ಶೋಚನೀಯವಾಗಿದ್ದು, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಪ್ರವಾಹ ುಂಟಾಗಿದೆ. ಈಗಾಗಳೇ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕರೆ ಮಾಡಿ ಮಾತನಾಡಿದ್ದು, ಸಹಕಾರ ನೀಡುವುದಾಗಿ  ಹೇಳಿದ್ದಾರೆ. ವಾಯುಪಡೆ 10 , ನೌಕಾಪಡೆಯು ಇನ್ನೂ ಎರಡು ಹೆಲಿಕಾಪ್ಟರ್‌ಗಳನ್ನು ಕಳುಹಿಸಿಕೊಟ್ಟಿದೆ ಎಂದು ಪಿಣರಾಯಿ ತಿಳಿಸಿದ್ದಾರೆ. 

 

ಪ್ರವಾಹದಲ್ಲಿ ಸಿಲುಕಿರುವ ಪ್ರವಾಸಿಗರು
ಗುಡ್ಡ ಕುಸಿತದಿಂದಾಗಿ ಮುನ್ನಾರ್ ಬಳಿ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಬಸ್ಸಿನಲ್ಲಿದ್ದ 82 ಮಂದಿ ಪ್ರವಾಸಿಗರು ಪ್ರವಾಹದಲ್ಲಿ ಸಿಲುಕಿದ್ದಾರೆ.

ಕೇರಳ ಪ್ರವಾಹದ ಸಂತ್ರಸ್ಥರಿಗೆ ಸಹಾಯ ಮಾಡಿ
ಇಲ್ಲಿನ ಪ್ರವಾಹದಲ್ಲಿ ಸಿಲುಕಿರುವ ಮಂದಿಯ ಬದುಕು ಶೋಚನೀಯವಾಗಿದ್ದು, ಅವರಿಗೆ ಸಹಾಯ ಮಾಡಬೇಕೆಂದಿದ್ದಲ್ಲಿ ಈ ಕೆಳಗಿನ ವಸ್ತುಗಳನ್ನು ಕಳುಹಿಸಲು ಅವಕಾಶವಿದೆ. 

* ಮೇಣದ ಬತ್ತಿ, ಬೆಂಕಿಪಟ್ಟಣ, ದೊಡ್ಡ ಮೇಣದ ಬತ್ತಿಗಳು
* ಟೂತ್‌ಬ್ರಶ್, ಪೇಸ್ಟ್
* ಬಟ್ಟೆ ಸೋಪು, ಸೋಪಿನ ಪುಡಿ
* ಒಡೊಮೊಸ್ 
* ರಸ್ಕ್
*ಎಣ್ಣೆ
* ಸಣ್ಣ ಮಕ್ಕಳ, ಶಿಶುಗಳ ಬಟ್ಟೆಗಳು
*ಡೆಟಾಲ್
* ಹಾಸಿಗೆಯ ಹಾಸುಗಳು
*ಹೊದಿಕೆಗಳು
* ಪುರುಷರ, ಮಹಿಳೆಯರ ಒಳ ಉಡುಪುಗಳು
* ಚಪ್ಪಲಿಗಳು
* ಟೀಪೌಡರ್
* ಸಕ್ಕರೆ, ಮಸಾಲ ಪೌಡರ್
* ಸಾಂಬಾರು ಪದಾರ್ಥಗಳು
* ಸ್ಯಾನಿಟರಿ, ನ್ಯಾಪ್ಕಿನ್‌ಗಳು

 

* ಎಲ್ಲಿಗೆ ತಲುಪಿಸಬೇಕು

ಶಂಕರ ಕಣ್ಣಿನ ಆಸ್ಪತ್ರೆ
ಸಂಪರ್ಕ : ಪ್ರಿಯಾ – 9739011685
ವಿಳಾಸ, ಕುಂಡಲಹಳ್ಳಿ ಗೇಟ್, ವರ್ತೂರು ಮುಖ್ಯ ರಸ್ತೆ, ಬೆಂಗಳೂರು- 560008

ಅವೋಹಿ
ಸಂಪರ್ಕ: ನಿವಾಸ್– 9731980066
ವಿಳಾಸ: ಅವೋಹಿ, #1/2 3ನೇ ಮಹಡಿ, ವೇಣೂಸ್ ಕಟ್ಟಡ, ಕಲ್ಯಾಣ ಮಂಟಪ ರಸ್ತೆ, ಜಕ್ಕಸಂದ್ರ, ಬೆಂಗಳೂರು- 560008

ಕಾನ್ಫಡೇರೇಷನ್ ಆಫ್ ಇಂಡಿಯನ್ ಇಂಡಸ್ಟ್ರೀ
ಸಂಪರ್ಕ: ನಿಗಮ್ ಲಾಮಾ = 7001663618, ಸುವಿನ್ ನಾರಾಯಣ್ – 9740233244
ವಿಳಾಸ: ಸಿಐಐ, 12ನೇ ಮುಖ್ಯರಸ್ತೆ, ಎಚ್‌ಎಎಲ್ 2ನೇ ಹಂತ, ಇಂದಿರಾನಗರ, ಬೆಂಗಳೂರು- 560008

ತಾನ್ಜೇಬ್ – ರಿವೈವಿಂಗ್ ಆನ್ ಎರಾ ಆಫ್ ಎಂಬ್ರೊಡೆರಿ
ಸಂಪರ್ಕ: 9916900719
ವಿಳಾಸ: 4017, 1ನೇ ಕ್ರಾಸ್. 2ನೇ ಹಂತ, ದೊಮ್ಮಲೂರು, ಬೆಂಗಳೂರು–560008

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !