ಬುಧವಾರ, ಫೆಬ್ರವರಿ 19, 2020
16 °C

18ಕ್ಕೆ ಕುಂ.ವೀ ಕಾದಂಬರಿ ‘ಜೈ ಭಜರಂಗಬಲಿ’ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಟ್ಟೂರು (ಬಳ್ಳಾರಿ ಜಿಲ್ಲೆ): ಸಾಹಿತಿ ಕುಂ.ವೀರಭದ್ರಪ್ಪ ಅವರ 20ನೇ ಕಾದಂಬರಿ ‘ಜೈ ಭಜರಂಗಬಲಿ’ ಇದೇ 18ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಬಿಡುಗಡೆ ಆಗಲಿದೆ.

ಮಂಗಳವಾರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಂವೀ, ‘ಈ ಕಾದಂಬರಿ ವರ್ತಮಾನ ಕಾಲದ ತಲ್ಲಣ, ವ್ಯಂಗ್ಯ, ವಿಡಂಬನೆ ಹೊಂದಿದೆ. ಇದು ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸದೊಂದು ದಾರಿ ತೋರಲಿದ್ದು, ಅಸಂಗತ, ಅವಾಸ್ತವ ಅಂಶಗಳ ಕಟು ಚಿತ್ರಣ ಒಳಗೊಂಡಿದೆ’ ಎಂದರು.

ಕಾದಂಬರಿ ಬಿಡುಗಡೆ ಕಾರ್ಯಕ್ರಮದಲ್ಲಿ ವಿಮರ್ಶಕ ಪ್ರೊ.ಸಿ.ಎನ್.ರಾಮಚಂದ್ರನ್ ಅಧ್ಯಕ್ಷತೆ ವಹಿಸುವರು. ಸಾಹಿತ್ಯ ಪೋಷಕರಾದ ಎಂ.ಜಿ.ಗೌಡ ಕಾದಂಬರಿ ಬಿಡುಗಡೆ ಮಾಡುವರು. ಕಾದಂಬರಿ ಕುರಿತು ಲೇಖಕ ಎಸ್.ದಿವಾಕರ, ಪ್ರೊ.ಬಸವರಾಜ ಕಲ್ಗುಡಿ ಮಾತನಾಡುವರು ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು