ಗುಜರಾತ್‌ ಸಚಿವಾಲಯಕ್ಕೆ ಬಂದ ಚಿರತೆ; ಪತ್ತೆ ಕಾರ್ಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ

7

ಗುಜರಾತ್‌ ಸಚಿವಾಲಯಕ್ಕೆ ಬಂದ ಚಿರತೆ; ಪತ್ತೆ ಕಾರ್ಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ

Published:
Updated:

ಅಹಮದಾಬಾದ್‌: ಅನಿರೀಕ್ಷಿತ ಅತಿಥಿಯಾಗಿ ಚಿರತೆಯೊಂದಿಗೆ ಸೋಮವಾರ ಗುಜರಾತ್‌ ಸಚಿವಾಲಯದ ಪ್ರದೇಶ ಪ್ರವೇಶಿಸಿದ್ದು, ಆತಂಕಕ್ಕೆ ಕಾರಣವಾಗಿದೆ. 

ಗೇಟ್‌ನ ಅಡಿಯಿಂದ ಚಿರತೆ ನುಸುಳುತ್ತಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬಂದಿದೆ. ಸೋಮವಾರ ಬೆಳಗಿನ ಜಾವ ಚಿರತೆ ಇಲ್ಲಿನ ಸಚಿವಾಲಯದ ಆವರಣ ಪ್ರವೇಶಿಸಿದೆ. 

ಇದೇ ಆವರಣದಲ್ಲಿ ಮುಖ್ಯಮಂತ್ರಿ ಕಚೇರಿ, ಸಚಿವಾಲಯಗಳು ಹಾಗೂ ವಿಧಾನಸಭೆ ಕಟ್ಟಡಗಳಿದ್ದು, ಸುಮಾರು ಅರಣ್ಯ ಇಲಾಖೆಯ 200 ಸಿಬ್ಬಂದಿ ಚಿರತೆ ಪತ್ತೆಮಾಡಿ ಸೆರೆಹಿಡಿಯುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. 

ಅರಣ್ಯ ಇಲಾಖೆ ಅಧಿಕಾರಿಗಳು ಪ್ರದೇಶ ಸುರಕ್ಷಿತವೆಂದು ಘೋಷಿಸುವವರೆಗೂ ಈ ಪ್ರದೇಶಕ್ಕೆ ಪ್ರವೇಶ ಕಲ್ಪಿಸುವ ಎಲ್ಲ ದ್ವಾರಗಳನ್ನು ಮುಚ್ಚಲಾಗಿರುತ್ತದೆ ಎಂದು ಗಾಂಧಿನಗರದ ಎಸ್‌ಪಿ ಮಯೂರ್‌ ಚಾವ್ಡಾ ತಿಳಿಸಿದ್ದಾರೆ. 

 

ಬರಹ ಇಷ್ಟವಾಯಿತೆ?

 • 6

  Happy
 • 3

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !