ಶನಿವಾರ, ಮಾರ್ಚ್ 6, 2021
32 °C

ಲೋಕಸಭೆಯಲ್ಲೂ ಆಡಿಯೊ ಸದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಜ್ಯ ಕಾಂಗ್ರೆಸ್-ಜಾತ್ಯತೀತ ಜನತಾದಳ ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿಯಿಂದ ನಡೆಯಿತೆನ್ನಲಾದ ಶಾಸಕರ ಖರೀದಿ ಪ್ರಕರಣ ಸೋಮವಾರ ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಧ್ವನಿಸಿತು.

ಲೋಕಸಭೆಯಲ್ಲಿ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ಸಂಸದರು ಸಭಾತ್ಯಾಗ ನಡೆಸಿ ಪ್ರತಿಭಟನೆ ದಾಖಲಿಸಿದರು. 

ಲೋಕಸಭೆಯಲ್ಲಿ ಮುಂಜಾನೆ ಪ್ರಶ್ನೋತ್ತರ ವೇಳೆ ಆರಂಭ ಆಗುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಕೆ.ಸಿ.ವೇಣುಗೋಪಾಲ್ ಕರ್ನಾಟಕದ ಪ್ರಕಣವನ್ನು ಎತ್ತಿದರು. ಪ್ರಶ್ನೋತ್ತರ ಅವಧಿಯ ನಂತರ ಅವಕಾಶ ನೀಡುವುದಾಗಿ ಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಭರವಸೆ ನೀಡಿರೂ ಗದ್ದಲ ತಣ್ಣಗಾಗಲಿಲ್ಲ. 

ಮುಂದೂಡಿಕೆಯ ನಂತರ ಸದನ ಪುನಃ ಸೇರಿದಾಗ ಕಾಂಗ್ರೆಸ್ ಗುಂಪಿನ ನಾಯಕ ಮಲ್ಲಿಕಾರ್ಜುನ ಖರ್ಗೆ ನಡೆಸಿದ ಮಾತಿನ ದಾಳಿಗೆ ಬಿಜೆಪಿ ಸಂಸದರು ಪ್ರತಿದಾಳಿ ನಡೆಸಿದರು. ಕರ್ನಾಟಕ ಸರ್ಕಾರ ಅತಂತ್ರವಾಗಲು ಕಾಂಗ್ರೆಸ್- ಜೆಡಿಎಸ್‌ ನಡುವಣ ಒಳಜಗಳ ಕಾರಣವೇ ವಿನಾ ಬಿಜೆಪಿ ಅಲ್ಲ. ಕಾಂಗ್ರೆಸ್ ಶಾಸಕರಿಬ್ಬರ ಬಡಿದಾಟದಲ್ಲಿ ಗಾಯಗೊಂಡ ಶಾಸಕ ಆಸ್ಪತ್ರೆ ಸೇರಬೇಕಾಯಿತು ಎಂದು ಕೇಂದ್ರ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ತಿರುಗೇಟು ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು