ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಪಾಲ: ಲಾಂಛನ ರಚಿಸಿ ಬಹುಮಾನ ಗೆಲ್ಲಿ

Last Updated 28 ಮೇ 2019, 18:25 IST
ಅಕ್ಷರ ಗಾತ್ರ

ನವದೆಹಲಿ: ಲಾಂಛನ ವಿನ್ಯಾಸ ಮತ್ತು ಘೋಷ ವಾಕ್ಯ ರೂಪಿಸಲು ಲೋಕಪಾಲ ಸಂಸ್ಥೆ ಸಾರ್ವಜನಿಕರಿಗೆ ಆಹ್ವಾನ ನೀಡಿದ್ದು, ವಿಜೇತರಿಗೆ ₹ 25 ಸಾವಿರ ಬಹುಮಾನ ನಿಗದಿ ಮಾಡಿದೆ.

ಐದು ಪದ ಮೀರದಂತೆ ಹಿಂದಿ, ಸಂಸ್ಕೃತ ಅಥವಾ ಇಂಗ್ಲಿಷ್‌ನಲ್ಲಿ ಘೋಷ ವಾಕ್ಯ ರಚಿಸಬೇಕಿದ್ದು, ಲಾಂಛನವು ಲೋಕಪಾಲದ ಆಶಯ ಧ್ವನಿಸುವಂತಿರಬೇಕು. ವಿನ್ಯಾಸ ಸ್ವಂತಿಕೆಯಿಂದ ಕೂಡಿದ್ದು, ಭಾರತೀಯ ಕೃತಿಸ್ವಾಮ್ಯ ಕಾಯ್ದೆ–957ಉಲ್ಲಂಘಿಸಿರಬಾರದು ಎಂದು ತಿಳಿಸಿದೆ.

ಜೂನ್‌ 13ರೊಳಗೆ ತಮ್ಮ ರಚನೆಯನ್ನು ಪಿಡಿಎಫ್‌ ರೂಪದಲ್ಲಿlokpal.registry@gov.in ಇ–ಮೇಲ್ ಮುಖಾಂತರ ಸಲ್ಲಿಸಬೇಕು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಹೆಚ್ಚಿನ ಮಾಹಿತಿಗೆ:http://www.lokpal.gov.in/?about_us?Logo?0102

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT