ಅಹಮದಾಬಾದ್‌: ಬಿಜೆಪಿ ಅಭ್ಯರ್ಥಿಯಾಗಿ ಪರೇಶ್‌ ರಾವಲ್‌ ಬದಲು ಎಚ್‌ಎಸ್‌ ಪಟೇಲ್‌

ಶುಕ್ರವಾರ, ಏಪ್ರಿಲ್ 26, 2019
35 °C
ಲೋಕಸಭಾ ಚುನಾವಣೆ

ಅಹಮದಾಬಾದ್‌: ಬಿಜೆಪಿ ಅಭ್ಯರ್ಥಿಯಾಗಿ ಪರೇಶ್‌ ರಾವಲ್‌ ಬದಲು ಎಚ್‌ಎಸ್‌ ಪಟೇಲ್‌

Published:
Updated:

ನವದೆಹಲಿ: ಗುಜರಾತ್‌ ಅಹಮದಾಬಾದ್‌ ಪೂರ್ವ ಲೋಕಸಭಾ ಕ್ಷೇತ್ರದಿಂದ ಹಸ್ಮುಖ್‌ ಎಸ್‌ ಪಟೇಲ್‌ ಅವರನ್ನು ಬಿಜೆಪಿ ಕಣಕ್ಕಿಳಿಸುತ್ತಿದೆ. ನಟ, ರಾಜಕಾರಣಿ ಪರೇಶ್ ರಾವಲ್‌ ಬದಲಾಗಿ ಬಿಜೆಪಿ ಬುಧವಾರ ತನ್ನ ಆಯ್ಕೆ ಪ್ರಕಟಿಸಿದೆ. 

ಎಚ್ಎಸ್‌ ಪಟೇಲ್‌ ಅವರು 2012 ಹಾಗೂ 2017ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. 

ಅಹಮದಾಬಾದ್‌ ‍ಪೂರ್ವ ಲೋಕಸಭಾ ಕ್ಷೇತ್ರದ ಹಾಲಿ ಸಂಸದರಾಗಿರುವ ನಟ ಪರೇಶ್‌ ರಾವಲ್‌, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ತೀರ್ಮಾನಿಸಿರುವುದಾಗಿ ಹಿಂದೆಯೇ ಘೋಷಿಸಿದ್ದರು. 

‘ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ಇಲ್ಲ ಎಂದು ನಾಲ್ಕೈದು ತಿಂಗಳ ಹಿಂದೆಯೇ ಪಕ್ಷಕ್ಕೆ ನಾನು ಮನವರಿಕೆ ಮಾಡಿಕೊಟ್ಟಿದ್ದೆ. ಅಂತಿಮವಾಗಿ ಇದು ಪಕ್ಷದ ನಿರ್ಧಾರ’ ಎಂದು ರಾವತ್‌ ಹೇಳಿದ್ದಾರೆ. 

ಏಪ್ರಿಲ್‌ 11ರಿಂದ ಲೋಕಸಭಾ ಚುನಾವಣೆ ಪ್ರಾರಂಭವಾಗಲಿದ್ದು, ಏಳು ಹಂತಗಳಲ್ಲಿ ಮೇ 19ರ ವರೆಗೂ ಮುಂದುವರಿಯಲಿದೆ. ಮೇ 23ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.  

ಬರಹ ಇಷ್ಟವಾಯಿತೆ?

 • 17

  Happy
 • 2

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !