ಸೋಮವಾರ, ಮೇ 17, 2021
23 °C
ಎಚ್‌ಎಎಲ್‌ಗೆ ಪ್ರದರ್ಶನದ ಉಸ್ತುವಾರಿ

ವೈಮಾನಿಕ ಪ್ರದರ್ಶನದಲ್ಲಿ ರಫೇಲ್‌ ಯುದ್ಧ ವಿಮಾನ ಭಾಗವಹಿಸುವುದಿಲ್ಲ –ವಾಯುಪಡೆ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಬೆಂಗಳೂರು: 2019ರ ಫೆಬ್ರವರಿಯಲ್ಲಿ ನಡೆಯಲಿರುವ ವೈಮಾನಿಕ ಪ್ರದರ್ಶನದಲ್ಲಿ ರಫೇಲ್‌ ಯುದ್ಧ ವಿಮಾನಗಳು ಭಾಗವಹಿಸುವುದಿಲ್ಲ ಎಂದು ಭಾರತೀಯ ವಾಯುಪಡೆ ಅಧಿಕಾರಿಗಳು ತಿಳಿಸಿದ್ದಾರೆ.

‘4 ದಿನಗಳ ಕಾಲ ನಡೆಯಲಿರುವ ಏರೋ ಇಂಡಿಯಾ ಪ್ರದರ್ಶನದಲ್ಲಿ ರಫೇಲ್‌ ಯುದ್ಧ ವಿಮಾನ ಭಾಗವಹಿಸುವುದಿಲ್ಲ. ಆದರ ಬದಲಿಗೆ 'ಡಸಾಲ್ಟ್‌ ಏವಿಯೇಷನ್' ಕಂಪೆನಿ ಇತರೆ ವಿಮಾನಗಳ ಹಾರಾಟ ನಡೆಸಲಿದೆ ಎಂಬುದು ನಮ್ಮ ನಿರೀಕ್ಷೆಯಾಗಿದೆ’ ಎಂದು ಏರ್‌ ಮಾರ್ಷಲ್‌ ಆರ್‌.ಕೆ. ಸಿಂಗ್‌ ಚೌಧರಿ ತಿಳಿಸಿದ್ದಾರೆ.

ವೈಮಾನಿಕ ಪ್ರದರ್ಶನಕ್ಕೆ ಸಂಬಂಧಿಸಿ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಪ್ರಮುಖ ಪಾತ್ರವಹಿಸಲಿದೆ ಎಂದು ಹೇಳಿದರು.

36 ರಫೇಲ್‌ ಯುದ್ಧ ವಿಮಾನಗಳ ಪೂರೈಕೆಗೆ ಸಂಬಂಧಿಸಿ ಭಾರತ ಸರ್ಕಾರ, ಫ್ರಾನ್ಸ್‌ನ 'ಡಸಾಲ್ಟ್‌ ಏವಿಯೇಷನ್' ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಪರಿಶೀಲನೆ ಪೂರ್ಣಗೊಂಡ ಬಳಿಕ 2019ರ ಸೆಪ್ಟೆಂಬರ್‌ ವೇಳೆಗೆ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಲಿದೆ.

ಏರ್‌ ಶೋನ 12ನೇ ಆವೃತ್ತಿ ಇದಾಗಿದ್ದು, ಬೆಂಗಳೂರು ಹೊರವಲಯದ ಯಲಹಂಕ ಏರ್‌ ಬೇಸ್‌ನಲ್ಲಿ ನಡೆಯಲಿದೆ.

‘ಏರ್‌ ಶೋವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ ಎಂದು ನಾವು ಭಾವಿಸಿದ್ದೇವೆ. ಆದರೆ ಈ ಕುರಿತು ರಕ್ಷಣಾ ಸಚಿವಾಲಯ ಕರೆ ನೀಡಲಿದೆ’ ಎಂದು ಚೌಧರಿ ತಿಳಿಸಿದರು.

ಇವನ್ನೂ ಓದಿ...

*ಸುದೀರ್ಘ ಕಥನ: ‘ರಫೇಲ್‌ ಡೀಲ್’ ನಿಮ್ಮ ಮನದಲ್ಲಿರುವ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

* ರಫೇಲ್‌ ಒಪ್ಪಂದ ರದ್ದು: ಕೇಂದ್ರ ನಕಾರ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು