ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಿಯನ್ನು ಛೇಡಿಸಿದ ತಂದೆಗೆ ಉದ್ಧವ್‌ ಠಾಕ್ರೆ ಕರೆ

Last Updated 9 ಜೂನ್ 2020, 5:55 IST
ಅಕ್ಷರ ಗಾತ್ರ

ಮುಂಬೈ: ಅಂತರದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಅಪ್ಪ– ಅಮ್ಮನಿಂದ ಬೈಸಿಕೊಂಡ ಮೂರು ವರ್ಷದ ಬಾಲಕಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಖುದ್ದಾಗಿ ಫೋನ್‌ ಕರೆಮಾಡಿ ಮಾತನಾಡಿದ್ದಾರೆ.

ಬಾಲಕಿ ತಂದೆಗೆ ಕರೆ ಮಾಡಿದ ಉದ್ಧವ್‌, ‘ ಶಿವ ಸೈನಿಕರಿಗೆ (ಸೇನಾ ಕಾರ್ಯಕರ್ತರಿಗೆ) ತೊಂದರೆ ಕೊಡಬೇಡಿ. ನನ್ನ ಹೆಸರನ್ನು ಬಳಸಿ ನೀವು ಬಾಲಕಿಅನ್ಶಿಕಾಗೆ ಬೈಯ್ದಿದ್ದೀರಿ’ ಎಂದು ಹಾಸ್ಯ ಧಾಟಿಯಲ್ಲಿ ಹೇಳಿರುವುದು ಧ್ವನಿಮುದ್ರಿತವಾಗಿದೆ.

ಹಾಲು ಮಾರುವವರಿಗೆ ಹಣ ಪಾವತಿಸುವಾಗ ಅಜಾಗರೂಕತೆಯಿಂದ ಶಿಂಧೆನೋಟುಗಳನ್ನು ಮುಟ್ಟಿದ್ದಳು. ಇದಕ್ಕಾಗಿ ಆಕೆ ಕ್ಷಮೆ ಕೇಳಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.ನೋಟುಗಳನ್ನು ಮುಟ್ಟಿದ್ದರ ಬಗ್ಗೆ ಉದ್ಧವ್‌ ಆಂಕಲ್‌ಗೆ ದೂರು ನೀಡುತ್ತೇನೆ ಎಂದು ಅನ್ಶಿಕಾ ತಾಯಿ ವಿಡಿಯೊದಲ್ಲಿ ಹೇಳಿದ್ದರು.

ಪುಣೆಯ ವಿಶ್ರಾಂತವಾಡಿಯಲ್ಲಿ ನೆಲೆಸಿರುವ ಈ ಕುಟುಂಬಕ್ಕೆ ಮುಖ್ಯಮಂತ್ರಿಯ ಕರೆ ಮಾಡಿರುವುದು ಆಶ್ಚರ್ಯ ತಂದಿದೆ. ಅಲ್ಲದೇ , ‘ಇನ್ನೊಮ್ಮೆ ತಂದೆ ತಾಯಿ ಬೈದರೆ, ನನಗೆ ಕರೆ ಮಾಡು’ ಎಂದು ಉದ್ಧವ್‌ ಅನ್ಶಿಕಾಗೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT