ಸೋಮವಾರ, ನವೆಂಬರ್ 18, 2019
25 °C

ಹರಿಯಾಣದಲ್ಲಿ ಶೇ.22.25, ಮಹಾರಾಷ್ಟ್ರದಲ್ಲಿ ಶೇ.14.54 ಮತದಾನ

Published:
Updated:

ನವದೆಹಲಿ: ಮಹಾರಾಷ್ಟ್ರದ 288 ಮತ್ತು ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಬೆಳಗ್ಗೆ 11 ಗಂಟೆ ಹೊತ್ತಿಗೆ ಹರಿಯಾಣದಲ್ಲಿ ಹರಿಯಾಣದಲ್ಲಿ ಶೇ.22.25, ಮಹಾರಾಷ್ಟ್ರದಲ್ಲಿ ಶೇ.14.54 ಮತದಾನವಾಗಿದೆ. ಗುರುವಾರ (ಅ.24) ಫಲಿತಾಂಶ ಪ್ರಕಟವಾಗಲಿದೆ.

ಎರಡೂ ರಾಜ್ಯಗಳ ಒಟ್ಟು 368 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಒಂದೇ ಹಂತದಲ್ಲಿ ಮುಕ್ತಾಯವಾಗಲಿದೆ. ಇದರ ಜತೆಯಲ್ಲೇ 17 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದ ಒಟ್ಟು 51 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೂ ಮತದಾನ ನಡೆಯಲಿದೆ.

ಮಹಾರಾಷ್ಟ್ರ ಮತ್ತು ಬಿಹಾರದಲ್ಲಿ ತೆರವಾಗಿರುವ 2 ಲೋಕಸಭಾ ಕ್ಷೇತ್ರಗಳ ಉಪಚುನಾವಣೆಗೂ ಮತದಾನ ನಡೆಯಲಿದ್ದು, ಎಲ್ಲೆಡೆ ಬಿಗಿಭದ್ರತೆ ಕಲ್ಪಿಸಲಾಗಿದೆ.

ಎಲೆಕ್ಷನ್ ರೌಂಡ್‌ಅಪ್ | 370ನೇ ವಿಧಿ ಎದುರು ಬಸವಳಿಯಿತು ಆರ್ಥಿಕ ಹಿಂಜರಿತ
ಹರಿಯಾಣ | ಜಾಟರ ನಾಡಿನಲ್ಲಿ ಯಾರಿಗೆ ಜಯ?

ಪ್ರತಿಕ್ರಿಯಿಸಿ (+)