ಬುಧವಾರ, ಫೆಬ್ರವರಿ 26, 2020
19 °C

ದೆಹಲಿ| ಶಾಹೀನ್‌ ಬಾಗ್‌ ಪ್ರತಿಭಟನಾ ಸ್ಥಳದಲ್ಲಿ ಮತ್ತೆ ಗುಂಡಿನ ದಾಳಿ: ವ್ಯಕ್ತಿ ವಶ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

prajavani

ನವದೆಹಲಿ: ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಬಳಿ ಯುವಕನೊಬ್ಬ ಬಂದೂಕಿನ ದಾಳಿ ನಡೆಸಿದ ಮರುದಿನವೇ ಅದೇ ಸ್ಥಳದಲ್ಲಿ ಮತ್ತೊಬ್ಬ ಗುಂಡಿನದಾಳಿ ನಡೆಸಿದ ಘಟನೆ ಶನಿವಾರ ಸಂಜೆ ನಡೆದಿದೆ.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಜಾಮಿಯಾ ಮಿಲಿಯಾ ವಿವಿ ಎದುರಿನ ಶಾಹೀನ್‌ ಬಾಗ್‌ನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತದಿದ್ದಾರೆ. ಈ ಸ್ಥಳದಿಂದ ಕೇವಲ 50 ಮೀಟರ್‌ ಅಂತರದಲ್ಲಿ ಪೊಲೀಸ್‌ ಬ್ಯಾರಿಕೇಟ್‌ಗಳ ಸಮೀಪದಿಂದಲೇ ಗುಂಡು ಹಾರಿಸಲಾಗಿದೆ. 20 ವರ್ಷ ವಯಸ್ಸಿನ ದಾಳಿಕೋರನನ್ನು ಸರಿತಾ ವಿಹಾರ್‌ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಆತ ಗಾಳಿಯಲ್ಲಿ ಗುಂಡು ಹಾರಿಸಿದ್ದು, ಯಾರೂ ಗಾಯಗೊಂಡಿಲ್ಲ. ದಾಳಿ ನಡೆಸಿದವನ ಹಿನ್ನಲೆಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ದಕ್ಷಿಣ ವಿಭಾಗದ ಜಂಟಿ ಪೊಲೀಸ್ ಆಯುಕ್ತ ದೆವೇಶ್‌ ಶ್ರಿವಾಸ್ತವ್‌ ತಿಳಿಸಿದರು.

‘ಪೊಲೀಸರ ಸಮ್ಮುಖದಲ್ಲಿಯೇ ಯುವಕನೊಬ್ಬ ಗುಂಡಿನ ದಾಳಿ ನಡೆಸಿದ ಮರುದಿನವೇ ಅಂತಹದ್ದೇ ಘಟನೆ ನಡೆಯುತ್ತದೆ ಎಂದಾದರೆ, ಪೊಲೀಸರನ್ನು ನಂಬುವುದಾದರು ಹೇಗೆ? ಅವರು ನಮ್ಮನ್ನು ರಕ್ಷಿಸುತ್ತಾರೆ ಎಂಬ ಅನುಮಾನ ಬರುತ್ತದೆ’ ಎಂದು ಪ್ರತಿಭಟನಾಕಾರ ಆಸಿಫ್‌ ಮುಜ್ತಾಬ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು