ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿರತೆ ಮರಿಯನ್ನು ಬ್ಯಾಗ್‌ನಲ್ಲಿಟ್ಟುಕೊಂಡು ಬ್ಯಾಂಕಾಕ್‌ನಿಂದ ಬಂದ ಪ್ರಯಾಣಿಕ: ಬಂಧನ

Last Updated 2 ಫೆಬ್ರುವರಿ 2019, 18:34 IST
ಅಕ್ಷರ ಗಾತ್ರ

ನವದೆಹಲಿ: ಚಿರತೆ ಮರಿಯನ್ನು ಬ್ಯಾಗ್‌ನಲ್ಲಿಟ್ಟುಕೊಂಡು ಬ್ಯಾಂಕಾಕ್‌ನಿಂದ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕನನ್ನು ವಿಮಾನ ನಿಲ್ದಾಣ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.

ಒಂದು ಕೆ.ಜಿ ತೂಕವಿದ್ದುಚಿರತೆ ಮರಿಯನ್ನು ಪ್ಲಾಸ್ಟಿಕ್‌ ಬಾಸ್ಕೆಟ್‌ನಲ್ಲಿ ಇಟ್ಟು, ಅದನ್ನು ಕೈಚೀಲದೊಳಗೆ ಅಡಗಿಸಿಕೊಂಡು ತರಲಾಗಿತ್ತು. ವಿಮಾನ ನಿಲ್ದಾಣದಲ್ಲಿ ಚಿರತೆ ಮರಿ ಸದ್ದು ಮಾಡಲು ಆರಂಭಿಸಿದೆ, ಇದರಿಂದ ಅನುಮಾನಗೊಂಡ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಲು ಯತ್ನಿಸಿದಾಗ ಟರ್ಮಿನಲ್‌ನಿಂದ ಬೇಗ ಹೊರಹೋಗಲು ಪ್ರಯಾಣಿಕ ಯತ್ನಿಸಿದ್ದ. ಕೈಚೀಲ ತೆರೆದು ನೋಡಿದಾಗ ಚಿರತೆ ಮರಿ ಇರುವುದು ಬೆಳಕಿಗೆ ಬಂದಿದೆ.

ಬ್ಯಾಗ್‌ನಿಂದ ಹೊರತೆಗೆದಾಗ ಚಿರತೆ ಮರಿ ಗಾಬರಿ ಹಾಗೂ ನಿತ್ರಾಣಗೊಂಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ವ್ಯಕ್ತಿಯನ್ನು ವಶಕ್ಕೆ ಪಡೆದು ಚಿರತೆ ಮರಿ ಬಗ್ಗೆ ಪ್ರಶ್ನಿಸುತ್ತಿದ್ದೇವೆ’ ಎಂದು ಚೆನ್ನೈ ವನ್ಯಜೀವಿ ಅಪರಾಧ ವಿಭಾಗದ ಮುಖ್ಯಸ್ಥ ಎ.ಒ. ಲಿಮಾತೋಶಿತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT