ಮಕ್ಕಳಿಗೆ ಲೈಂಗಿಕ ಕಿರುಕುಳ: ದೂರು ನೀಡಲು ನಿರ್ಬಂಧ ಬೇಡ

7
ಕೇಂದ್ರ ಕಾನೂನು ಸಚಿವಾಲಯಕ್ಕೆ ಮೇನಕಾ ಗಾಂಧಿ ಮನವಿ

ಮಕ್ಕಳಿಗೆ ಲೈಂಗಿಕ ಕಿರುಕುಳ: ದೂರು ನೀಡಲು ನಿರ್ಬಂಧ ಬೇಡ

Published:
Updated:
Deccan Herald

ನವದೆಹಲಿ: ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಕುರಿತು ದೂರು ನೀಡಲು ಯಾವುದೇ ವಯೋಮಿತಿ ನಿಗದಿಪಡಿಸಬೇಡಿ ಎಂದು ಕೇಂದ್ರ ಕಾನೂನು ಸಚಿವಾಲಯಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಮನವಿ ಮಾಡಿದ್ದಾರೆ. 

‘10–15 ವರ್ಷ ಹಳೆಯವಾಗಿದ್ದರೂ ಸಹ ಲೈಂಗಿಕ ಕಿರುಕುಳ ಸಂಬಂಧಿ ದೂರುಗಳನ್ನು ದಾಖಲಿಸಿಕೊಳ್ಳಬೇಕು. ಇದಕ್ಕೆ ಅನುವು ಮಾಡಿಕೊಡಬೇಕು ಎಂದು ಸಚಿವಾಲಯಕ್ಕೆ ಪತ್ರ ಬರೆಯಲಾಗಿದೆ’ ಎಂದು ಮೇನಕಾ ಹೇಳಿದ್ದಾರೆ. 

30 ವರ್ಷದ ದಾಟಿದ್ದರೂ ಅಪ್ರಾಪ್ತ ವಯಸ್ಸಿನಲ್ಲಿ ಎದುರಾದ ಅನುಚಿತ ಘಟನೆಗಳ ಬಗ್ಗೆ ದೂರು ನೀಡಲು ಅವಕಾಶ ನೀಡುವಂತೆ ಮೇನಕಾ ಗಾಂಧಿ ಅವರು ಈ ಮೊದಲು ಪ್ರಸ್ತಾಪ ಇಟ್ಟಿದ್ದರು.

#MeTooಗೆ ಮೆಚ್ಚುಗೆ: ಲೈಂಗಿಕ ದೌರ್ಜನ್ಯದ ವಿರುದ್ಧ ದನಿಯೆತ್ತಲು ಪ್ರೇರೇಪಣೆ ನೀಡುವ #MeToo ಅಭಿಯಾನ ಭಾರತದಲ್ಲೂ ಆರಂಭವಾಗಿರುವುದಕ್ಕೆ ಮೇನಕಾ ಮೆಚ್ಚುಗೆ ವ್ಯಕ್ತಪಡಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !