ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಮಾಸ್ತ ಹುದ್ದೆಗೆ ಎಂಸಿಎ, ಎಂಬಿಎ ಪದವೀಧರರ ಅರ್ಜಿ

ಬಿಹಾರ: 166 ಗ್ರೂಪ್‌ ಡಿ ಹುದ್ದೆಗೆ 5 ಲಕ್ಷ ನಿರುದ್ಯೋಗಿಗಳ ಅರ್ಜಿ
Last Updated 22 ನವೆಂಬರ್ 2019, 20:01 IST
ಅಕ್ಷರ ಗಾತ್ರ

ಪಟ್ನಾ: ರಾಜ್ಯ ವಿಧಾನಸಭಾ ಸಚಿವಾಲಯದಲ್ಲಿ ಖಾಲಿ ಇರುವ 166 ಗ್ರೂಪ್‌ ‘ಡಿ’ ಹುದ್ದೆಗೆ ಬರೋಬ್ಬರಿ 5 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಗುಮಾಸ್ತ, ಮಾಲಿ ಮತ್ತು ಗೇಟ್‌ಕೀಪರ್‌ ಕೆಲಸಗಳಿಗೆ ಇವರು ಅರ್ಜಿ ಸಲ್ಲಿಸಿದ್ದಾರೆ.

ಇವರಲ್ಲಿ ಹೆಚ್ಚಿನವರು ಎಂಬಿಎ ಮತ್ತು ಎಂಸಿಎ ಪದವೀಧರರು ಇದ್ದಾರೆ ಎಂದು ನೇಮಕಾತಿ ಪ್ರಕ್ರಿಯೆಯಲ್ಲಿ ತೊಡಗಿದ್ದ ಅಧಿಕಾರಿಗಳು ಹೇಳಿದ್ದಾರೆ.

‘ನಾವು ಬೇಕಾಗಿಯೇ ಗುಮಾಸ್ತ ಹುದ್ದೆಗೆ ಅರ್ಜಿ ಸಲ್ಲಿಸಿದ್ದೇವೆ ಎಂದು ಅರ್ಥವಲ್ಲ. ನಾವು ಅಸಹಾಯಕರಾಗಿದ್ದೇವೆ. ನಿಜವಾಗಿ ನಾವು ಪಡೆದ ಶಿಕ್ಷಣಕ್ಕೆ ಸರಿಯಾದ ಉದ್ಯೋಗ ಪಡೆಯಲು ಯತ್ನಿಸಿದ್ದೇವೆ’ ಎಂದು ಉದ್ಯೋಗಾಕಾಂಕ್ಷಿಯೊಬ್ಬರು ಹೇಳಿದ್ದಾರೆ.

ಎಂಸಿಎ ಪದವಿ ಹೊಂದಿದ್ದರೂ ನಿರುದ್ಯೋಗಿಯಾಗಿದ್ದ ನನ್ನ ಗೆಳೆಯ ಹೇಳುವ ಪ್ರಕಾರ, ‘ಗ್ರೂಪ್ ‘ಡಿ’ ಕೆಲಸವಾದರೂ ಸರ್ಕಾರಿ ಕೆಲಸದ ರೀತಿಯೇ ಬೇರೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT