ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಗ ಉತ್ಸವಕ್ಕೆ ಅನುದಾನ

Last Updated 10 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಾದ್ಯಂತ 11 ಜಿಲ್ಲೆಗಳಲ್ಲಿನ ಕರಗ ಮಹೋತ್ಸವ ಆಚರಣೆಗೆ ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ₹ 1.60 ಕೋಟಿ ಅನುದಾನ ಬಿಡುಗಡೆ ಮಾಡಿದೆ.

ಸುದ್ದಿಗೋಷ್ಠಿಯಲ್ಲಿ ಶನಿವಾರ ಈ ವಿಷಯ ತಿಳಿಸಿದ ವಿಧಾನ ಪರಿಷತ್ ಸದಸ್ಯ ಪಿ.ಆರ್.ರಮೇಶ್, ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಖಾಂತರ ಈ ಹಣ ನೀಡಲಾಗುವುದು. ಈಗಾಗಲೇ ಈ ಕುರಿತಂತೆ ಸರ್ಕಾರ ಆದೇಶಿಸಿದೆ’ ಎಂದು ತಿಳಿಸಿದರು.

ಬೆಂಗಳೂರು ನಗರ ಜಿಲ್ಲೆಯ 47, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 18, ಚಿಕ್ಕಬಳ್ಳಾಪುರದ 3, ರಾಮನಗರದ 6, ಕೋಲಾರದ 37, ತುಮಕೂರಿನ 4, ಮೈಸೂರು ಜಿಲ್ಲೆಯ 2, ಚಾಮರಾಜನಗರ 2 ಹಾಗೂ ಶಿವಮೊಗ್ಗ, ಹಾವೇರಿ ಮತ್ತು ಮಂಡ್ಯ ಜಿಲ್ಲೆಗಳ ತಲಾ ಒಂದೊಂದು ದೇವಾಲಯಗಳಿಗೆ ಈ ಅನುದಾನ ದೊರೆಯಲಿದೆ.

ದೇವಾಲಯಗಳನ್ನು ಎ, ಬಿ ಮತ್ತು ಸಿ ಎಂದು ವರ್ಗಿಕರಣ ಮಾಡಲಾಗಿದೆ. ‘ಎ’ ವರ್ಗಕ್ಕೆ ₹ 2 ಲಕ್ಷ, ‘ಬಿ’ ವರ್ಗಕ್ಕೆ ₹ 1.50 ಹಾಗೂ ‘ಸಿ’ ವರ್ಗಕ್ಕೆ ₹ 1 ಲಕ್ಷ ನಿಗದಿಪಡಿಸಲಾಗಿದೆ. ಫೆಬ್ರುವರಿಯಿಂದ ಮೇವರೆಗೆ ಬೇರೆ ಬೇರೆ ದಿನಗಳಲ್ಲಿ ನಡೆಯಲಿರುವ ಕರಗ ಉತ್ಸವಗಳಿಗೆ ಈ ಅನುದಾನ ಲಭಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT