ಶನಿವಾರ, ಸೆಪ್ಟೆಂಬರ್ 19, 2020
21 °C

ಈ ವರ್ಷ ಭಾರತದಲ್ಲಿ ನಡೆದ ಗುಂಪು ಹಲ್ಲೆ ಪ್ರಕರಣಗಳ ಸಂಖ್ಯೆ 11!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾರ್ಖಂಡ್:  ಜೈ ಶ್ರೀರಾಮ್, ಜೈ ಹನುಮಾನ್  ಘೋಷಣೆ ಕೂಗುವಂತೆ ಒತ್ತಾಯಿಸಿ ಗುಂಪೊಂದು ತಬ್ರೇಜ್ ಅನ್ಸಾರಿ (40) ಎಂಬ ವ್ಯಕ್ತಿಯ ಮೇಲೆ ಜೂನ್ 18ರಂದು ಹಲ್ಲೆ ನಡೆಸಿತ್ತು. ಈ ಘಟನೆ ನಡೆದು ನಾಲ್ಕು ದಿನಗಳ ಬಳಿಕ ತಬ್ರೇಜ್ ಸಾವಿಗೀಡಾಗಿದ್ದರು.

ಆದಾಗ್ಯೂ, ಈ ವರ್ಷದಲ್ಲಿ ಗುಂಪು ಹಲ್ಲೆಗೊಳಗಾಗಿ ವ್ಯಕ್ತಿಯೊಬ್ಬರು ಸಾವಿಗೀಡಾದ ಘಟನೆ ಇದೇ ಮೊದಲನೆಯದ್ದೇನೂ ಅಲ್ಲ,
Factchecker.in ಅಂಕಿ ಅಂಶದ ಪ್ರಕಾರ ದೇಶದಲ್ಲಿ ನಡೆದ 11ನೇ ದ್ವೇಷ ಕೃತ್ಯ (hatecrime) ಇದಾಗಿದೆ. ಇಲ್ಲಿಯವರೆಗೆ ಗುಂಪು ಹಲ್ಲೆ ಪ್ರಕರಣದಲ್ಲಿ ನಾಲ್ಕು ಮಂದಿ ಸಾವಿಗೀಡಾಗಿದ್ದು 22 ಮಂದಿ ಗಾಯಗೊಂಡಿದ್ದಾರೆ.

ಕಳೆದ ದಶಕದ ಅಂಕಿ ಅಂಶ ನೋಡಿದರೆ ಭಾರತದಲ್ಲಿ 297 ದ್ವೇಷ ಕೃತ್ಯಗಳು ನಡೆದಿದ್ದು, 98 ಮಂದಿ ಸಾವಿಗೀಡಾಗಿದ್ದಾರೆ. 722 ಮಂದಿಗೆ ಗಾಯಗಳಾಗಿವೆ.

ಕಳೆದ  ಕೆಲವು ವರ್ಷಗಳಲ್ಲಿ ದೇಶದಲ್ಲಿ ಗುಂಪು ಹಲ್ಲೆ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. 2015ರ ನಂತರದ ಅಂಕಿ ಅಂಶಗಳನ್ನು ನೋಡಿದರೆ ಹಸು ಕಳವು ಅಥವಾ ಗೋಹತ್ಯೆ ಸಂಬಂಧಿಸಿದ ಗುಂಪು ಹಲ್ಲೆ ಪ್ರಕರಣಗಳ ಸಂಖ್ಯೆ 121. ಅಂದಹಾಗೆ  2012ರಿಂದ 2014ರ ಅವಧಿಯಲ್ಲಿ ಇಂತಾ ಘಟನೆಗಳು ನಡೆದದ್ದು  6! 

 2009 ರಿಂದ 2019ರ ವರೆಗಿನ ಅವಧಿಯ ಅಂಕಿ ಅಂಶಗಳನ್ನು ನೋಡಿದರೆ ಗುಂಪು ಹಲ್ಲೆಗೊಳಗಾದವರ ಸಂಖ್ಯೆಯಲ್ಲಿ ಶೇ. 59ರಷ್ಟು ಮುಸ್ಲಿಮರಾಗಿದ್ದಾರೆ. ಈ ಪೈಕಿ ಗೋಹತ್ಯೆ ಮತ್ತು ಹಸು ಕಳವು ಆರೋಪ ಪ್ರಕರಣಗಳ ಸಂಖ್ಯೆ ಶೇ. 28. 

ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ  ಶೇ. 66 ಪ್ರಕರಣಗಳು ನಡೆದಿವೆ. ಅದೇ ವೇಳೆ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ  ಶೇ. 16ರಷ್ಟು ಪ್ರಕರಣಗಳು ವರದಿಯಾಗಿವೆ.

ಇದನ್ನೂ ಓದಿ: ಜಾರ್ಖಂಡ್‌| ಏಳು ತಾಸು ಥಳಿಸಿ. ’ಜೈ ಶ್ರೀರಾಮ್‌’ಹೇಳುವಂತೆ ಒತ್ತಾಯ, ವ್ಯಕ್ತಿ ಸಾವು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು