ಭಾನುವಾರ, ಆಗಸ್ಟ್ 18, 2019
26 °C

ಕೃಷ್ಣಾರ್ಜುನರಿದ್ದಂತೆ ಮೋದಿ–ಶಾ: ನಟ ರಜನಿಕಾಂತ್‌ ಮೆಚ್ಚುಗೆ

Published:
Updated:
Prajavani

ಚೆನ್ನೈ: ಜಮ್ಮು ಮತ್ತು ಕಾಶ್ಮೀರದ ವಿಶೇಷಾಧಿಕಾರ ರದ್ದತಿಯ ಮೊದಲು ಮತ್ತು ನಂತರದ ಪರಿಸ್ಥಿತಿಯನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ನಿಭಾಯಿಸಿದ ರೀತಿಗೆ ತಮಿಳು ತಾರೆ ಮತ್ತು ರಾಜಕಾರಣಿ ರಜನಿಕಾಂತ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

‘ಮಿಷನ್‌ ಕಾಶ್ಮೀರಕ್ಕಾಗಿ ನಿಮಗೆ ಹೃದಯಪೂರ್ವಕ ಅಭಿನಂದನೆಗಳು ಅಮಿತ್‌ ಶಾ ಅವರೇ. ನೀವು ಇದನ್ನು ನಿಭಾಯಿಸಿದ ರೀತಿ ಶ್ಲಾಘನೀಯ. ಸಂಸತ್ತಿನಲ್ಲಿ ನೀವು ಮಾಡಿದ ಭಾಷಣ ಅದ್ಭುತ. ಅಮಿತ್ ಶಾ ಮತ್ತು ಮೋದಿ ಅವರು ಕೃಷ್ಣ ಮತ್ತು ಅರ್ಜುನ ಇದ್ದ ಹಾಗೆ. ಯಾರು ಕೃಷ್ಣ, ಯಾರು ಅರ್ಜುನ ಅನ್ನುವುದು ನಮಗೆ ಗೊತ್ತಿಲ್ಲ. ಅದು ಅವರಿಗಷ್ಟೇ ಗೊತ್ತು’ ಎಂದು ರಜನಿಕಾಂತ್‌ ಹೇಳಿದರು. 

ಇದು ಸೇರಿದ್ದ ಜನರಲ್ಲಿ ಭಾರಿ ನಗುವಿಗೆ ಕಾರಣವಾಯಿತು. ವೇದಿಕೆಯಲ್ಲಿ ಇದ್ದ ಶಾ  ಮುಖದಲ್ಲಿಯೂ ಮುಗುಳು ನಗೆ ಮೂಡಿತು. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ‘ಲಿಸನಿಂಗ್‌, ಲರ್ನಿಂಗ್‌ ಎಂಡ್‌ ಲೀಡಿಂಗ್‌’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಭಾನುವಾರ ಮಾತನಾಡಿದರು. ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾ ಅವರು ಪುಸ್ತಕ ಬಿಡುಗಡೆ ಮಾಡಿದರು.

Post Comments (+)