ಭಾನುವಾರ, ಅಕ್ಟೋಬರ್ 20, 2019
21 °C

ಮೋದಿ–ಜಿನ್‌ಪಿಂಗ್‌ ಭೇಟಿ: ಬ್ಯಾನರ್‌ಗೆ ಅನುಮತಿ

Published:
Updated:
Prajavani

ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರಿಗೆ ಸ್ವಾಗತ ಕೋರುವ ಬ್ಯಾನರ್‌ಗಳನ್ನು ಅಳವಡಿಸಲು ತಮಿಳುನಾಡು ಸರ್ಕಾರಕ್ಕೆ ಮದ್ರಾಸ್‌ ಹೈಕೋರ್ಟ್ ಗುರುವಾರ ಅನುಮತಿ ನೀಡಿದೆ.

ಮೋದಿ ಹಾಗೂ ಜಿನ್‌ಪಿಂಗ್‌ ಅವರ ಅನೌಪಚಾರಿಕ ಭೇಟಿ ಮುಂದಿನ ವಾರ ಮಾಮಲ್ಲಪುರಂನಲ್ಲಿ ನಿಗದಿಯಾಗಿದೆ.

ಬ್ಯಾನರ್‌ಗಳನ್ನು ಅಳವಡಿಸಲು ಯಾವುದೇ ಆಕ್ಷೇಪವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಆದರೆ ರಾಜಕೀಯ ಪಕ್ಷಗಳಿಗೆ ಬ್ಯಾನರ್‌ ಅಳವಡಿಸಲು ಅನುಮತಿ ನೀಡುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ. ರಸ್ತೆ ಬದಿಯಲ್ಲಿ ಬ್ಯಾನರ್‌ಗೆ ಕೋರ್ಟ್ ನಿಷೇಧ ಹೇರಿತ್ತು.

ಹೋರ್ಡಿಂಗ್‌ಗೆ ಸ್ಕೂಟರ್‌ ಡಿಕ್ಕಿ ಹೊಡೆದು ಟೆಕಿಯೊಬ್ಬರು ಮೃತಪಟ್ಟ ಬಳಿಕ ಬ್ಯಾನರ್ ತೆರವಿಗೆ ನ್ಯಾಯಾಲಯ ಸೂಚಿಸಿತ್ತು.

Post Comments (+)