ಕಾನ್‌ಸ್ಟೇಬಲ್ ಹುದ್ದೆಗೆ ಬಿ.ಟೆಕ್‌ ಪದವೀಧರರು

7

ಕಾನ್‌ಸ್ಟೇಬಲ್ ಹುದ್ದೆಗೆ ಬಿ.ಟೆಕ್‌ ಪದವೀಧರರು

Published:
Updated:
ಸಾಂದರ್ಭಿಕ ಚಿತ್ರ

ಚಂಡೀಗಡ: ಪಂಜಾಬ್‌ನಲ್ಲಿ ಈಚೆಗೆ 180 ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳಿಗೆ ನೇಮಕ ಪೂರ್ಣಗೊಂಡಿದೆ. ಈ ಹುದ್ದೆಗಳಿಗೆ ಆಯ್ಕೆಯಾದವರಲ್ಲಿ ಬಹುತೇಕ ಮಂದಿ ಬಿ.ಟೆಕ್ ಪದವೀಧರರಾಗಿದ್ದಾರೆ. ಅಲ್ಲದೆ ಆರು ಜನರು ಎಂ.ಟೆಕ್ ಪದವೀಧರರೂ ಇದ್ದಾರೆ.

ಅಷ್ಟೂ ಮಂದಿ ಮುಂದಿನ ಎರಡು ವರ್ಷಗಳ ಕಾಲ, ಅಂದರೆ ತಮ್ಮ ಪ್ರೊಬೆಷನರಿ ಅವಧಿ ಪೂರ್ಣಗೊಳ್ಳುವವರೆಗೆ ₹ 10,000 ವೇತನವನ್ನಷ್ಟೇ ಪಡೆಯಲಿದ್ದಾರೆ. ಆನಂತರ ವೇತನ ₹ 20,000ಕ್ಕೆ ಏರಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ನಮ್ಮ ದೇಶದಲ್ಲಿ ಸರ್ಕಾರವು ಶಿಕ್ಷಣಕ್ಕಷ್ಟೇ ಮಹತ್ವ ನೀಡುತ್ತಿದೆ. ಆದರೆ ಶಿಕ್ಷಣಕ್ಕೆ ತಕ್ಕ ಉದ್ಯೋಗ ಸಿಗುತ್ತಿಲ್ಲ ಎಂಬುದು ಈ ನೇಮಕಾತಿಯಿಂದ ಸಾಬೀತಾಗಿದೆ ಎಂದು ಆಯ್ಕೆಯಾಗಿರುವ ಅಭ್ಯರ್ಥಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

‘ಉದ್ಯೋಗ ಭದ್ರತೆ ಇರುತ್ತದೆ ಎಂಬ ಕಾರಣಕ್ಕೆ ಬಹುತೇಕ ಮಂದಿ ಸರ್ಕಾರಿ ಉದ್ಯೋಗವನ್ನೇ ಬಯಸುತ್ತಾರೆ. ಆದರೂ ಅಗತ್ಯ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಎಂಬುದು ಈ ನೇಮಕಾತಿಯಿಂದ ಗೊತ್ತಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಈ ಹುದ್ದೆಗಳಿಗೆ ಆಯ್ಕೆಯಾಗಿರುವ ಬಹುತೇಕ ಮಂದಿಗೆ ಪೊಲೀಸ್ ಇಲಾಖೆಯ ತಾಂತ್ರಿಕ, ಮಾಹಿತಿ ತಂತ್ರಜ್ಞಾನ ಮತ್ತು ಸೈಬರ್‌ ಕ್ರೈಂ ವಿಭಾಗಗಳಲ್ಲಿ ಕೆಲಸ ನೀಡಲಾಗುತ್ತದೆ. ಅದೇ ಸಮಾಧಾನದ ಸಂಗತಿ. ಇವರನ್ನು ಸೈಬರ್‌ ಕ್ರೈಂ ಮಾತ್ರವಲ್ಲ, ಸಾಮಾನ್ಯ ಅಪರಾಧ ಪ್ರಕರಣಗಳನ್ನು ಬೇಧಿಸಲೂ ತಂತ್ರಜ್ಞರಾಗಿ ಬಳಸಿಕೊಳ್ಳಲು ಅವಕಾಶವಿದೆ’ ಎಂದು ಮೂಲಗಳು ಹೇಳಿವೆ.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !