ಗುರುವಾರ , ಫೆಬ್ರವರಿ 20, 2020
29 °C

ನಾಗ್ಪುರ: ಯುವತಿ ಮೇಲೆ ಅತ್ಯಾಚಾರ, ಗುಪ್ತಾಂಗಕ್ಕೆ ರಾಡ್ ತುರುಕಿದ ದುಷ್ಕರ್ಮಿ

ಪಿಟಿಐ Updated:

ಅಕ್ಷರ ಗಾತ್ರ : | |

prajavani

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿ 19ರ ಹರೆಯದ ಯುವತಿಯೊಬ್ಬಳನ್ನು ಉಸಿರುಗಟ್ಟಿಸಿ ಪ್ರಜ್ಞೆ ತಪ್ಪಿಸಿದ ನಂತರ ದುಷ್ಕಮಿಯೊಬ್ಬ ಅತ್ಯಾಚಾರವೆಸಗಿದ್ದಾನೆ. ಆಮೇಲೆ ಆಕೆಯ ಗುಪ್ತಾಂಗಕ್ಕೆ ಕಬ್ಬಿಣ ರಾಡ್ ತುರುಕಿಸಿ ಪೈಶಾಚಿಕ ಕೃತ್ಯವೆಸಗಿದ ಪ್ರಕರಣ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಕಳೆದ ಮಂಗಳವಾರ (2020 ಜನವರಿ 21)ರಂದು ಈ ಪ್ರಕರಣ ನಡೆದಿದೆ. ಅತ್ಯಾಚಾರವೆಸಗಿದ ಆರೋಪಿ ಯೋಗಿಲಾಲ್ ರಹಾಂಗ್‌ದಲೇ (52)  ಎಂಬಾತನನ್ನು ಪೊಲೀಸರುಬಂಧಿಸಿದ್ದಾರೆ. ಈತ ನೇಯ್ಗೆ ಕಾರ್ಖಾನೆಯೊಂದರಲ್ಲಿ ಮೇಲ್ವಿಚಾರಕನಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. 

 ಸಂತ್ರಸ್ತೆ ತನ್ನ ಸಹೋದರ, ಯೋಗಿಲಾಲ್ ಮತ್ತು ಇನ್ನೊಬ್ಬ ಮಹಿಳೆ ಜತೆ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ಸಂತ್ರಸ್ತೆಯ  ಸಹೋದರ ಮತ್ತು ಇನ್ನೊಬ್ಬ ಮಹಿಳೆ ಊರಿಗೆ ಹೋಗಿದ್ದ ವೇಳೆ ಯೋಗಿಲಾಲ್ ಅತ್ಯಾಚಾರವೆಸಗಿದ್ದಾನೆ.

ಮನೆಯಲ್ಲಿ ರಾತ್ರಿ ಒಬ್ಬಳೇ ಇದ್ದ ವೇಳೆ ಯೋಗಿಲಾಲ್ ಅತ್ಯಾಚಾರವೆಸಗಲು ಯತ್ನಿಸಿದ್ದಾನೆ. ಇದನ್ನು ತಡೆದಾಗ ಆಕೆಯ ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿದ್ದಾನೆ. ಪ್ರಜ್ಞೆ ತಪ್ಪಿ ಬಿದ್ದ ಯುವತಿ ಮೇಲೆ ಅತ್ಯಾಚಾರವೆಸಗಿ ಆಮೇಲೆ  ಗುಪ್ತಾಂಗದೊಳಗೆ ಕಬ್ಬಿಣದ ರಾಡ್ ತುರುಕಿಸಿದ್ದಾನೆ ಎಂದು  ಪೊಲೀಸರು ಹೇಳಿದ್ದಾರೆ.

ಅತ್ಯಾಚಾರ ನಡೆದು ಮೂರು ದಿನ ಕಳೆದ ನಂತರ ಸಂತ್ರಸ್ತೆ ತನ್ನ ಸಹೋದರನಿಗೆ ಹೇಳಿದ್ದು, ಆಮೇಲೆ ಪೊಲೀಸರಿಗೆ ದೂರು ನೀಡಿದ್ದಾರೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು