ಸೋಮವಾರ, ಆಗಸ್ಟ್ 19, 2019
21 °C

ಅಮಿತ್ ಶಾ ಮತ್ತು ಪ್ರಧಾನಿ ಮೋದಿಯನ್ನು ಕೃಷ್ಣಾರ್ಜುನರಿಗೆ ಹೋಲಿಸಿದ ರಜನಿಕಾಂತ್ 

Published:
Updated:

ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೃಷ್ಣ ಮತ್ತು ಅರ್ಜುನರಂತೆ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದಾರೆ. 

ಮಿಷನ್ ಕಾಶ್ಮೀರ್ (370ನೇ ವಿಧಿ ರದ್ದು ಮಾಡುವ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷಾಧಿಕಾರವನ್ನು ತೆಗೆದುಹಾಕಿರುವ ತೀರ್ಮಾನ) ಬಗ್ಗೆ ಶಾ ಅವರನ್ನು ಅಭಿನಂದಿಸಿದ  ರಜನಿಕಾಂತ್  ಇದೊಂದು ಅದ್ಭುತ ನಡೆ ಎಂದಿದ್ದಾರೆ.

ನಮಗೆ ಕೃಷ್ಣ ಯಾರು ಎಂಬುದು  ಗೊತ್ತಿಲ್ಲ, ಅರ್ಜುನ ಯಾರೆಂಬುದು ಗೊತ್ತಿಲ್ಲ. ಮೋದಿ ಮತ್ತು ಅಮಿತ್ ಶಾ ಇವರಿಬ್ಬರು ಗೊತ್ತು ಎಂದಿದ್ದಾರೆ ರಜನಿಕಾಂತ್.

ಭಾನುವಾರ ವೆಂಕಯ್ಯ ನಾಯ್ಡು ಅವರ ಕಚೇರಿಯಲ್ಲಿ ನಡೆದ ಲಿಸನಿಂಗ್, ಲರ್ನಿಂದ್ ಆ್ಯಂಡ್  ಲೀಡಿಂಗ್ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ರಜನಿಕಾಂತ್ ಈ ಮಾತುಗಳನ್ನಾಡಿದ್ದಾರೆ.

ಜನರ ಶ್ರೇಯಾಭಿವೃದ್ಧಿಗಾಗಿ ದುಡಿಯುವ ಧಾರ್ಮಿಕ ವ್ಯಕ್ತಿಯಾಗಿದ್ದಾರೆ ನಾಯ್ಡು ಎಂದು ರಜನಿಕಾಂತ್ ಹೊಗಳಿದ್ದಾರೆ.

ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್‌ ಜಾವಡೇಕರ್‌ , ತಮಿಳ್ನಾಡು ಗವರ್ನರ್ ಬನ್ವಾರಿಲಾಲ್ ಪುರೋಹಿತ್, ಮುಖ್ಯಮಂತ್ರಿ ಕೆ.ಪಳನಿ ಸ್ವಾಮಿ, ಉಪ ಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
 

Post Comments (+)