ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನದಲ್ಲಿ ಕೇಳಲಿರುವ ಪ್ರಶ್ನೆಗಳನ್ನು ಮೋದಿಯವರಿಗೆ ಮುಂಚಿತವಾಗಿ ನೀಡಲಾಗಿತ್ತೇ?

Last Updated 14 ಮೇ 2019, 9:15 IST
ಅಕ್ಷರ ಗಾತ್ರ

ನವದೆಹಲಿ: ನ್ಯೂಸ್ ನೇಷನ್ ಸುದ್ದಿವಾಹಿನಿ ಮೇ.11ರಂದು ಪ್ರಧಾನಿ ನರೇಂದ್ರ ಮೋದಿಯವರ ಸಂದರ್ಶನ ಪ್ರಸಾರ ಮಾಡಿತ್ತು. ಈ ಸಂದರ್ಶನದಲ್ಲಿ ಮೋದಿಯವರು ಬಾಲಾಕೋಟ್ ದಾಳಿ ಬಗ್ಗೆ ವಿವರಿಸುವಾಗ ‘ಬಾಲಾಕೋಟ್ ವಾಯುದಾಳಿ ವೇಳೆ ಮೋಡ ಮುಸುಕಿದ ವಾತಾವರಣ ಇತ್ತು. ಹಾಗಾಗಿ, ನಮ್ಮ ವಿಮಾನಗಳನ್ನು ಪತ್ತೆ ಮಾಡಲು ಪಾಕಿಸ್ತಾನದ ರೇಡಾರ್‌ಗಳಿಗೆ ಸಾಧ್ಯವಿಲ್ಲ. ಆದ್ದರಿಂದ ಮೋಡ ಇದ್ದ ದಿನವೇ ದಾಳಿ ನಡೆಸಿ ಎಂದು ಆದೇಶಿಸಿದ್ದೆ’ ಎಂದಿದ್ದರು.

ಪಾಕ್ ರೇಡಾರ್‌ಗಳಿಂದ ತಪ್ಪಿಸಿಕೊಳ್ಳಲು ಮೋಡದ ನೆರವು ಎಂಬ ಮೋದಿಯ ಮಾತು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಆಯಿತು.

ಇದೇ ಸಂದರ್ಶನದಲ್ಲಿ ಮೋದಿ 'ನಾನು 1988ರಲ್ಲಿ ಡಿಜಿಟಲ್ ಕ್ಯಾಮೆರಾ ಬಳಸಿದ್ದೆ. ಭಾರತದಲ್ಲಿ ಈಗ ಡಿಜಿಟಲ್ ಕ್ಯಾಮೆರಾ ಬಳಸಿದವರಲ್ಲಿ ನಾನೂ ಒಬ್ಬ. ಆ ಕ್ಯಾಮೆರಾದಿಂದ ನಾನು ಬಿಜೆಪಿಯ ಹಿರಿಯ ನಾಯಕ ಎಲ್‍.ಕೆ. ಅಡ್ವಾಣಿಯವರ ಕಲರ್ ಫೋಟೊ ಕ್ಲಿಕ್ಕಿಸಿದ್ದೆ. ಇಷ್ಟೇ ಅಲ್ಲ 1988ರಲ್ಲಿಯೇ ತಾನು ಇಮೇಲ್ ಬಳಸುತ್ತಿದ್ದೆ ಎಂದು ಹೇಳಿದ್ದರು, ಮೋದಿಯವರ ಈ ಡಿಜಿಟಲ್ ಬಡಾಯಿ ಬಗ್ಗೆಯೂ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ, ಟ್ರೋಲ್, ಸತ್ಯಶೋಧನೆಗಳು ನಡೆದವು.

ಇದೆಲ್ಲದರ ನಡುವೆಯೇ ನ್ಯೂಸ್ ನೇಷನ್ ಸಂದರ್ಶನದಲ್ಲಿ ವಾಹಿನಿಯ ನಿರೂಪಕರು ಕೇಳಲಿರುವ ಪ್ರಶ್ನೆಯನ್ನು ಮೋದಿಯವರಿಗೆ ಮುಂಚಿತವಾಗಿಯೇ ನೀಡಲಾಗಿತ್ತು ಎಂದುಫ್ಯಾಕ್ಟ್‌ಚೆಕ್ ವೆಬ್‌ಸೈಟ್ ಆಲ್ಟ್ ನ್ಯೂಸ್ ಸಹಸಂಸ್ಥಾಪಕ ಪ್ರತೀಕ್ ಸಿನ್ಹಾ ಆರೋಪಿಸಿದ್ದಾರೆ.

ಮೋದಿಯವರಿಗೆ ಮುಂಚಿತವಾಗಿಪ್ರಶ್ನೆಗಳನ್ನು ನೀಡಲಾಗಿತ್ತು ಎಂಬುದಕ್ಕೆ ದಾಖಲೆಯನ್ನೂ ಪ್ರತೀಕ್ ಸಿನ್ಹಾ ಟ್ವೀಟಿಸಿದ್ದಾರೆ.
ಪ್ರತೀಕ್ ಸಿನ್ಹಾ ಅವರ ಟ್ವೀಟ್ ಹೀಗಿದೆ:

ನ್ಯೂಸ್ ನೇಷನ್ ಟಿವಿ ಸಂದರ್ಶನದಲ್ಲಿ ನಿರೂಪಕ ದೀಪಕ್ ಚೌರಾಸಿಯಾ,ನರೇಂದ್ರ ಮೋದಿಯವರಲ್ಲಿ ಕೇಳಿದ ಪ್ರಶ್ನೆ -ಕವಿ ನರೇಂದ್ರ ಮೋದಿಯವರು ಕಳೆದ ಐದು ವರ್ಷದಲ್ಲಿ ಏನಾದರೂ ಬರೆದಿದ್ದಾರಾ?
ಆಗ ಮೋದಿ ನಗುತ್ತಾ, ಕೈಯಲ್ಲಿದ್ದ ಪೇಪರ್‌ನ್ನು ತಿರುವಿ ಹಾಕುತ್ತಾರೆ.ಅದರಲ್ಲಿ ಅವರ ಕವಿತೆಗಳಿವೆ. ಈ ಕವಿತೆಯ ಮೇಲೆ ನಿರೂಪಕರು ಕೇಳಿರುವ ಪ್ರಶ್ನೆಯೂ ಪ್ರಿಂಟ್ ಆಗಿರುವುದು ಕಾಣಿಸುತ್ತದೆ.

ಪ್ರತೀಕ್ ಸಿನ್ಹಾ ಅವರು ಸರಣಿ ಟ್ವೀಟ್‌ಗಳಲ್ಲಿ ಸಂದರ್ಶನದ ವಿಡಿಯೊ ತುಣುಕುಗಳನ್ನು ದಾಖಲೆಯಾಗಿ ಲಗತ್ತಿಸಿಈ ಆರೋಪ ಮಾಡಿದ್ದಾರೆ.

ಮತ್ತೊಮ್ಮೆ ಟ್ರೋಲ್ ಆದ ಮೋದಿ
ಪ್ರತೀಕ್ ಸಿನ್ಹಾ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಟ್ವೀಟಿಗರು ಮೋದಿಯನ್ನು ಮತ್ತೊಮ್ಮೆ ಟ್ರೋಲ್ ಮಾಡಿದ್ದಾರೆ.ಕೆಲವೊಂದು ಟ್ರೋಲ್ ಟ್ವೀಟ್‌ಗಳು ಇಲ್ಲಿವೆ.

ಇದನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT