ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

750 ಕೆಜಿ ಈರುಳ್ಳಿ ಮಾರಿ ಸಿಕ್ಕಿದ 1,064 ರೂಪಾಯಿಯನ್ನು ಪ್ರಧಾನಿಗೆ ಕಳಿಸಿದ ರೈತ!

Last Updated 3 ಡಿಸೆಂಬರ್ 2018, 9:08 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದ ಈರುಳ್ಳಿ ಬೆಳೆಗಾರರೊಬ್ಬರು ಈರುಳ್ಳಿ ಮಾರಿದ ಹಣವನ್ನು ಪ್ರಧಾನಿ ಪರಿಹಾರ ನಿಧಿಗೆ ನೀಡಿ ತಮ್ಮ ಪ್ರತಿಭಟನೆಯನ್ನು ಸೂಚಿಸಿದ್ದಾರೆ.

ಇಲ್ಲಿನ ನಾಸಿಕ್ ಜಿಲ್ಲೆಯ ನಿಫಾದ್ ತೆಹಸಿನ್ ನಿವಾಸಿಸಂಜಯ್ ಸಥೆ ಎಂಬ ರೈತ ಈ ರೀತಿ ಪ್ರತಿಭಟನೆ ನಡೆಸಿದ್ದಾರೆ.2010ರಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ಭಾರತಕ್ಕೆ ಭೇಟಿ ನೀಡಿದ್ದಾಗ 'ಪ್ರಗತಿಶೀಲ ರೈತ'ರೊಂದಿಗೆ ಸಂವಾದ ನಡೆಸಿದ್ದರು.ಒಬಾಮ ಜತೆ ಸಂವಾದ ನಡೆಸಲು ಕೇಂದ್ರ ಕೃಷಿ ಸಚಿವಾಲಯ ಆಯ್ಕೆ ಮಾಡಿದ್ದ ಪ್ರಗತಿಶೀಲ ರೈತರಲ್ಲಿ ಒಬ್ಬರಾಗಿದ್ದರು ಈ ಸಂಜಯ್ ಸಥೆ.

ಪ್ರತಿಭಟನೆ ಯಾಕೆ?
ಸಥೆ ಅವರು ಈ ಬಾರಿ 750 ಕೆಜಿ ಈರುಳ್ಳಿ ಬೆಳೆದಿದ್ದಾರೆ.ಕಳೆದ ವಾರ ನಿಫಾದ್ ಮಾರುಕಟ್ಟೆಯಲ್ಲಿ 750 ಕೆಜಿ ಈರುಳ್ಳಿ ಮಾರಿದಾಗ ಸಿಕ್ಕಿದ ದುಡ್ಡು ₹1, 064!.ಈ ಹಿಂದೆ 1.40 ಕೆಜಿ ಈರುಳ್ಳಿ ಮಾರಿದರೆ ₹1,064 ಸಿಗುತ್ತಿತ್ತು. ಅಂದರೆ 750 ಕೆಜಿ ಈರುಳ್ಳಿ, 1 ಕೆಜಿ ಈರುಳ್ಳಿ ದರದಲ್ಲಿ ಮಾರಾಟವಾಗಿದೆ.ನಾಲ್ಕು ತಿಂಗಳ ದುಡಿಮೆಗೆ ಸಿಕ್ಕಿದ್ದು ಇಷ್ಟೇನಾ? ಎಂದು ಬೇಸರವಾಗುತ್ತಿದೆ.ಹಾಗಾಗಿ ನನಗೆ ಸಿಕ್ಕಿದ ₹1,064 ಪ್ರಧಾನಿ ಅವರ ವಿಪತ್ತುಪರಿಹಾರ ನಿಧಿಗೆ ದೇಣಿಗೆ ನೀಡಿ ನನ್ನ ಪ್ರತಿಭಟನೆ ವ್ಯಕ್ತ ಪಡಿಸಿದ್ದೇನೆ.ಮನಿ ಆರ್ಡರ್ ಕಳಿಸಬೇಕಾದರೆ ನಾನು ಹೆಚ್ಚುವರಿ ₹54 ಕೂಡಾ ಖರ್ಚು ಮಾಡಬೇಕಿದೆ ಎಂದು ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು ಹೇಳಿದ್ದಾರೆ.
ನಾನು ಯಾವುದೇ ರಾಜಕೀಯ ಪಕ್ಷವನ್ನು ಪ್ರತಿನಿಧಿಸುತ್ತಿಲ್ಲ.ಆದರೆ ರೈತರ ಬಗ್ಗೆಸರ್ಕಾರ ನಿರಾಸಕ್ತಿ ತೋರಿಸುತ್ತಿರುವುದು ಸಿಟ್ಟು ತಂದಿದೆ.ನವೆಂಬರ್ 29ರಂದು ನಿಫಾದ್ ಅಂಚೆ ಕಚೇರಿಯಿಂದ ನರೇಂದ್ರ ಮೋದಿ, ಭಾರತದ ಪ್ರಧಾನಿ ಎಂಬ ವಿಳಾಸಕ್ಕೆಮನಿ ಆರ್ಡರ್ ಮಾಡಿದ್ದರು.

ಉತ್ತರ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ದೇಶದ ಶೇ. 50 ರಷ್ಟು ಈರುಳ್ಳಿ ಬೆಳೆ ಬೆಳೆಯಲಾಗುತ್ತದೆ.

8 ವರ್ಷಗಳ ಹಿಂದೆ ಒಬಾಮ ಅವರ ಜತೆಗಿನ ಭೇಟಿ ಹೇಗಿತ್ತು ಎಂದು ಕೇಳಿದಾಗ,ರೈತರಿಗೆ ದನಿ ಮೂಲಕ ಸಲಹೆ ಸೂಚನೆ ನೀಡುವ ಸೇವೆ (ಟೆಲಿಕಾಂ ಆಪರೇಟರ್ ಗಳು ಈ ಸೇವೆ ಒದಗಿಸುತ್ತಾರೆ)ಯನ್ನು ನಾನು ಹಲವು ವರ್ಷದಿಂದ ಬಳಸುತ್ತಿದ್ದೇನೆ. ನಾನು ನನಗೆ ಬೇಕಾದ ಮಾಹಿತಿಯನ್ನು ಈ ಮೂಲಕ ಪಡೆಯುತ್ತಿದ್ದರಿಂದ ಬೆಳೆಯು ಉತ್ತಮವಾಗಿತ್ತು. ಆಕಾಶವಾಣಿಯಲ್ಲಿ ಸ್ಥಳೀಯರೇಡಿಯೊ ಸ್ಟೇಷನ್ ನಲ್ಲಿ ನನ್ನ ಅನುಭವದ ಬಗ್ಗೆ ಮಾತನಾಡುವ ಅವಕಾಶವೂ ನನಗೆ ಸಿಕ್ಕಿತ್ತು. ಹಾಗಾಗಿ ಒಬಾಮ ಮುಂಬೈಗೆ ಭೇಟಿ ಕೊಟ್ಟಾಗ ಸೇಂಟ್ ಕ್ಸೇವಿಯರ್ಸ್ ಕಾಲೇಜಿನಲ್ಲಿ ಸ್ಟಾಲ್ ಸ್ಥಾಪಿಸುವಂತೆ ಕೃಷಿ ಸಚಿವಾಲಯವು ಹೇಳಿತ್ತು. ಅನುವಾದಕರ ಸಹಾಯದಿಂದ ನಾನುಕೆಲವೇ ನಿಮಿಷ ಒಬಾಮ ಜತೆ ಮಾತನಾಡಿದ್ದೆ ಎಂದಿದ್ದಾರೆ ಸಥೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT